ಕೊರಟಗೆರೆ : ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುಧಾಕರ್ ಲಾಲ್ ಶುಕ್ರವಾರ ಸೇತುವೆ ಕುಸಿತ ಸ್ಥಳಕ್ಕೆ ಭೇಟಿ ಆತಂಕ ಕ್ಕೊಳಗಾದ ರೈತರಿಗೆ ಧೈರ್ಯ ತುಂಬಿದರು.
ಇನ್ನು ಅತಿವೃಷ್ಟಿಯಿಂದ ಗೊರವನಹಳ್ಳಿ ಪುಣ್ಯಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಕುಸಿದಿದೆ. ಸೇತುವೆ ಕುಸಿತದಿಂದ ವಾಹನ ಸಂಚಾರಕ್ಕೆ ಅಡಚಣೆ ಆಗಿದೆ. ಅಧಿಕಾರಿವರ್ಗ ಸೇತುವೆಯ ಎರಡು ಕಡೆ ಭದ್ರತೆ ಒದಗಿಸಬೇಕಿದೆ. ಕೊರಟಗೆರೆ ಕ್ಷೇತ್ರದ 5 ಕಡೆ ಸೇತುವೆ ಶಿಥಿಲವಾಗಿವೆ.
ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ತಕ್ಷಣ ತುರ್ತು ಪರಿಹಾರದ ಕಾಮಗಾರಿ ಶುರು ಮಾಡಬೇಕು ಎಂದು ಒತ್ತಾಯ ಮಾಡಿದರು.
- ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್
PublicNext
26/08/2022 08:50 pm