ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಮಾನವೀಯತೆ ಮೆರೆದ ಭೈರತಿ ಬಸವರಾಜ್.!

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬಗ್ಗೆ ಸಭೆ ನಡೆಸಿ ಕಾರ್ಯ ನಿಮಿತ್ತ ಶಿವಮೊಗ್ಗ ಕಡೆಗೆ ಹೋಗುವಾಗ ಬೈಕ್ ನಿಂದ ವ್ಯಕ್ತಿಯೊಬ್ಬ ಬಿದ್ದಿದ್ದು, ಇದನ್ನು ಗಮನಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದರು.

ಬೈಕ್‌ನಲ್ಲಿ ಬರುತ್ತಿದ್ದಾಗ ಎರಡು ನಾಯಿಗಳು ಅಡ್ಡ ಬಂದಿವೆ. ಈ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ನೆಲಕ್ಕೆ ಬಿದ್ದಿದ್ದ. ಇದನ್ನು ನೋಡಿದ ಸಚಿವರು ಕಾರನ್ನು ನಿಲ್ಲಿಸಿ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲು ‌ವಾಹನದ ವ್ಯವಸ್ಥೆ ಮಾಡಿದರು.

ಮಾರುತಿ ಓಮ್ನಿಯಲ್ಲಿ ಇದೇ ಮಾರ್ಗದಲ್ಲಿ ಗಂಡ, ಹೆಂಡತಿ ಮತ್ತು ಮಗು ಹೋಗುತ್ತಿದ್ದರು. ಈ ವೇಳೆ ತಾಯಿ ಮತ್ತು ಮಗುವಿಗೆ ಬೇರೆ ವಾಹನದಲ್ಲಿ ಹೋಗಲು ಅನುಕೂಲ ಮಾಡಿಕೊಟ್ಟ ಸಚಿವರು, ವ್ಯಕ್ತಿಯನ್ನು ಓಮ್ನಿಯಲ್ಲಿ ಕಳುಹಿಸಿಕೊಟ್ಟರು. ಸಚಿವರ ಈ ಸಹಾಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

Edited By : Vijay Kumar
PublicNext

PublicNext

13/07/2022 05:46 pm

Cinque Terre

47.2 K

Cinque Terre

1

ಸಂಬಂಧಿತ ಸುದ್ದಿ