ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿ ನೆನಪಿಸಿಕೊಂಡ ಬಾಲ್ಯ ಸ್ನೇಹಿತ 'ಅಬ್ಬಾಸ್' ಪತ್ತೆ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿಯ 100ನೇ ವರ್ಷದ ಹುಟ್ಟು ಹಬ್ಬದ ವೇಳೆ ಬರೆದುಕೊಂಡಿದ್ದ ಬ್ಲಾಗ್ ಒಂದರಲ್ಲಿ ತಮ್ಮ ಬಾಲ್ಯ ಸ್ನೇಹಿತ ಅಬ್ಬಾಸ್ ಕುರಿತಾಗಿ ಹೇಳಿಕೊಂಡಿದ್ದಾರೆ.

ಬ್ಲಾಗ್‌ನಲ್ಲಿ ತಮ್ಮ ತಾಯಿ ಬಾಲ್ಯದಲ್ಲಿ ಹಾಗೂ ಮದುವೆಯಾದ ಬಳಿಕ ಅನುಭವಿಸಿದ ಕಷ್ಟಗಳು ಮತ್ತು ಸವಾಲುಗಳ ಬಗ್ಗೆ ವರ್ಣಿಸಿದ್ದರು. ಜೊತೆಗೆ ಅನೇಕ ಸ್ಥಳಗಳು, ವ್ಯಕ್ತಿಗಳನ್ನು ಸ್ಮರಿಸಿಕೊಂಡಿದ್ದರು. ಅವರಲ್ಲಿ ತಮ್ಮ ತಂದೆಯ ಗೆಳೆಯನ ಮಗ ಅಬ್ಬಾಸ್‌ರನ್ನು ನೆನಪಿಸಿಕೊಂಡಿದ್ದರು. ಆ ಬಳಿಕ ಅಬ್ಬಾಸ್ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿತ್ತು.

ಪ್ರಧಾನಿ ಮೋದಿ ಬರೆದುಕೊಂಡಂತೆ. ನನ್ನ ತಂದೆಯ ಆಪ್ತ ಸ್ನೇಹಿತ ಪಕ್ಕದ ಗ್ರಾಮದಲ್ಲಿ ವಾಸಿಸುತ್ತಿದ್ದರು. ಅವರ ಅಕಾಲಿಕ ಮರಣದ ನಂತರ, ನನ್ನ ತಂದೆ ತಮ್ಮ ಗೆಳೆಯನ ಮಗ ಅಬ್ಬಾಸ್‌ನನ್ನು ನಮ್ಮ ಮನೆಗೆ ಕರೆದುಕೊಂಡು ಬಂದರು. ಆತ ನಮ್ಮ ಜೊತೆ ಇದ್ದು ಶಿಕ್ಷಣ ಪೂರೈಸಿದರು ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಮೋದಿ ಅವರ ಅಣ್ಣ ಮಾಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿದ್ದು, ಅಬ್ಬಾಸ್ ಇದೀಗ ಆಸ್ಟ್ರೇಲಿಯಾದಲ್ಲಿದ್ದಾರೆ. ಈ ಹಿಂದೆ ಗುಜರಾತ್‌ನಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದರು. ಆ ಬಳಿಕ ನಿವೃತ್ತಿಹೊಂದಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಅಬ್ಬಾಸ್ ಅವರಿಗೆ ಇಬ್ಬರೂ ಮಕ್ಕಳು ಹಿರಿಯ ಮಗ ಗುಜರಾತ್‌ನಲ್ಲಿ ನೆಲೆಸಿದ್ದು, ಕಿರಿಯ ಮಗ ಆಸ್ಟ್ರೇಲಿಯಾದಲ್ಲಿ ನೆಲೆಸಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತ ನೆಟ್ಟಿಗರು ಅಬ್ಬಾಸ್ ಕುರಿತಾಗಿ ಮೋದಿ ಬರೆದುಕೊಂಡ ಬಳಿಕ ವಿವಿಧ ರೀತಿಯ ಕಾಮೆಂಟ್ ಹರಿದಾಡುತ್ತಿದೆ.

Edited By : Vijay Kumar
PublicNext

PublicNext

20/06/2022 07:30 am

Cinque Terre

71.36 K

Cinque Terre

1

ಸಂಬಂಧಿತ ಸುದ್ದಿ