ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನೇಶ್ ಗುಂಡೂರಾವ್‌ಗೆ ಮಾತೃ ವಿಯೋಗ

ಬೆಂಗಳೂರು: ಮಾಜಿ ಸಿಎಂ ಗುಂಡೂರಾವ್ ಅವರ ಪತ್ನಿ, ಹಾಗೂ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರ ತಾಯಿ ವರಲಕ್ಷ್ಮೀ ಗುಂಡೂರಾವ್ ವಿಧಿವಶರಾಗಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಕೊರೊನಾದಿಂದ ಬಳಲುತ್ತಿದ್ದ ವರಲಕ್ಷ್ಮೀ ಗುಂಡೂರಾವ್, ಬಳಿಕ ಸೋಂಕಿನಿಂದ ಗುಣಮುಖರಾಗಿದ್ದರು.

ಮತ್ತೆ ಶ್ವಾಸಕೋಶದ ಸೋಂಕಿನಿಂದ ಇತ್ತೀಚೆಗೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದ ಅವರು ಕಳೆದ ರಾತ್ರಿ 9:20ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ವರಲಕ್ಷ್ಮೀ ಅವರಿಗೆ 72 ವರ್ಷ ವಯಸ್ಸಾಗಿತ್ತು.

ಇಂದು ದೇವನಹಳ್ಳಿ ಸಮೀಪದ ಫಾರ್ಮ್ ಹೌಸ್ ನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನೆರವೇರಲಿದೆ.

ವರಲಕ್ಷ್ಮೀ ಗುಂಡೂರಾವ್, ತಮ್ಮ ಪುತ್ರರಾದ ದಿನೇಶ್ ಗುಂಡೂರಾವ್ ಹಾಗೂ ಮಹೇಶ್ ಗುಂಡೂರಾವ್ ಸೇರಿದಂತೆ ಅಪಾರ ಬಂಧು ಬಳಗವನ್ನ ಆಗಲಿದ್ದಾರೆ.

Edited By : Nirmala Aralikatti
PublicNext

PublicNext

06/01/2021 07:18 am

Cinque Terre

78.66 K

Cinque Terre

8

ಸಂಬಂಧಿತ ಸುದ್ದಿ