ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಕೆಶಿಗೆ ಸೋಂಕು ಅಂಟಿಸಲು ಸೋಂಕಿತನನ್ನು ಕಳುಹಿಸಲಾಗಿತ್ತು: ಡಿಕೆ ಸುರೇಶ್ ಆರೋಪ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ ಕೊರೊನಾ ಸೋಂಕು ಅಂಟಿಸಲೆಂದೇ ಸೋಂಕಿತ ವ್ಯಕ್ತಿಯನ್ನು ಅವರ ಬಳಿ ಕಳುಹಿಸಲಾಗಿತ್ತು ಎಂದು ಸಂಸದ ಡಿ.ಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

ಪಾದಯಾತ್ರೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೇಕಂತಲೇ ಸೋಂಕಿತ ವ್ಯಕ್ತಿಯನ್ನು ಡಿಕೆಶಿ ಬಳಿ ಕಳುಹಿಸಲಾಗಿತ್ತು. ಈ ಮೂಲಕ ಅವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ಮಾಡುವ ಹುನ್ನಾರ ನಡೆದಿತ್ತು ಎಂದು ಕಿಡಿ ಕಾರಿದ್ದಾರೆ.

ಮೇಕೆದಾಟು ಪಾದಯಾತ್ರೆ ನಡೆಸಬೇಡಿ ಎಂದು ಮನವಿ ಮಾಡಲು ಎಡಿಸಿ ಜವರೇಗೌಡ, ಡಿ.ಕೆ ಶಿವಕುಮಾರ್ ಅವರ ಬಳಿ ಬಂದಿದ್ದರು. ಕೊರೊನಾ ನಿಯಮ ಪಾಲಿಸಿ ಎಂದು ಹೇಳಿದ್ದರು. ಬಳಿಕ ಸಂಜೆ ಡಿಕೆಶಿ ಬಳಿ ಬಂದು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಕೂಡ ಹೇಳಿದ್ದರು. ಈ ವೇಳೆ ಎಡಿಸಿಗೆ, ಡಿ.ಕೆ ಶಿವಕುಮಾರ್ ಬೈದಿದ್ದರು. ಇತ್ತ ಪಾದಯಾತ್ರೆ ನಡೆಯುತ್ತಿರುವ ಸ್ಥಳಕ್ಕೆ ಹೋಗಿದ್ದ ಕಾರಣ ಎಡಿಸಿ ಇಂದು ಬೆಳಗ್ಗೆ ಟೆಸ್ಟ್ ಮಾಡಿಸಿಕೊಂಡಿದ್ದರು. ಇದೀಗ ಅವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಸದ್ಯ ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.

Edited By : Nagaraj Tulugeri
PublicNext

PublicNext

10/01/2022 08:51 pm

Cinque Terre

55.58 K

Cinque Terre

21

ಸಂಬಂಧಿತ ಸುದ್ದಿ