ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಸಿಪಿ ಯೋಗಶ್ವರ್‌ಗೆ ಚನ್ನಪಟ್ಟಣದಲ್ಲಿ ಏನ್ ಕೆಲ್ಸಾ? ಕಲ್ಲು ತೂರಾಟ ಕುರಿತು ಸಿಎಂ ಇಬ್ರಾಹಿಂ ಪ್ರತಿಕ್ರಿಯೆ

ಕಲಬುರಗಿ: ರಾಮನಗರದ ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಮದ್ಯೆ ಗಲಾಟೆ ನಡೆದು ಸಿಪಿ ಯೋಗಶ್ವರ್ ಕಾರ್ ಮೇಲೆ ಕಲ್ಲು ತೂರಾಟ ಪ್ರಕರಣ ಕುರಿತಾಗಿ ಕಲಬುರಗಿಯ ಅಫಜಲಪುರದಲ್ಲಿ ಜೆ.ಡಿ.ಎಸ್ ರಾಜ್ಯದ್ಯಕ್ಷ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿಯವರು ಅನಗತ್ಯವಾಗಿ ಕಾಲು ಕೆರೆದು ಜಗಳಕ್ಕೆ ಬರ್ತಿದ್ದಾರೆ. ಅಲ್ಲಿ ಎಮ್ಎಲ್‌ಎ ಇರೋದು ಎಚ್‌ಡಿ ಕುಮಾರಸ್ವಾಮಿ, ಎಮ್ಎಲ್‌ಸಿ ಆಗಿರೋರಿಗೆ ಅಲ್ಲೇನು ಕೆಲಸ..? ಮದುವೆ ಆಗಿರೋ ಗಂಡ ಇರಬೇಕಾದ್ರೆ, ಮದುವೆ ಆಗದೆ ಇರೋರಿಗೆ ಏನ್ ಕೆಲಸ..?

ನಾನು ಎಮ್ಎಲ್‌ಸಿ ಇದ್ದೆನೆ, ಭದ್ರಾವತಿಯಲ್ಲಿ ಹೋಗಿ ಅಲ್ಲಿನ ಎಮ್ಎಲ್ಎ ಅವರನ್ನು ಬಿಟ್ಟು ಯಾವುದಾದ್ರೂ ಕೆಲಸ ಮಾಡ್ತಿನಿ ಅಂದ್ರೆ ಏನು‌ ಅರ್ಥ..? ಹೀಗೆಲ್ಲಾ ಮಾಡಿ ಕುಮಾರಸ್ವಾಮಿ ಯನ್ನ ವೀಕ್ ಮಾಡ್ತೆನೆ ಅಂದುಕೊಂಡರೆ ಅವರ ತಪ್ಪು ಕಲ್ಪನೆ.

ದೇವಗೌಡರ ಅವರ ಬೀಜದ ವೃಕ್ಷ ಆಲದ ಮರದಂತೆ ಬೆಳೆದಾಗಿದೆ. ಆ ಮರವನ್ನ ಕೆಡುವುದು ಅಷ್ಟು ಸುಲಭದ ಮಾತಲ್ಲ ಎಂದು ಬಿಜೆಪಿಗೆ ತೀರುಗೇಟು ನೀಡಿದರು. ಇಧೇ ವೇಳೆ ಸಿಎಂ ಇಬ್ರಾಹಿಂ ಕಾಂಗ್ರೆಸ್ ನವರು ನಡೆಸುತ್ತಿರುವ ಭಾರತ್ ಜೋಡೊ ಕಾರ್ಯಕ್ರಮ, ಅದು ಭಾರತ ಜೋಡೋ ಅಲ್ಲ ಅದು ಕಾಂಗ್ರೆಸ್ ಜೋಡೊ ಕಾರ್ಯಕ್ರಮ ಎಂದು ವ್ಯಂಗ್ಯವಾಡಿದರು.

Edited By : Somashekar
PublicNext

PublicNext

02/10/2022 08:36 pm

Cinque Terre

86.36 K

Cinque Terre

2

ಸಂಬಂಧಿತ ಸುದ್ದಿ