ರಾಮನಗರ: ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ರಾಮನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ, ಅದನ್ನು ಜೆಡಿಎಸ್ ಪಕ್ಷ ನಿರ್ಧರಿಸಲಿದೆ. ಈ ಬಗ್ಗೆ ನಿಖಿಲ್ ತನ್ನ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಜೆಡಿಎಸ್ ಪಕ್ಷವನ್ನು 30ರಿಂದ 40 ಸ್ಥಾನದಲ್ಲಿ ಗೆಲ್ಲಿಸಿಕೊಂಡು ಬರಬೇಕೆಂಬ ತೀರ್ಮಾನ ನಿಖಿಲ್ ಮನಸ್ಸಿನಲ್ಲಿದೆ. ಪಕ್ಷದಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲಲು ಸಮಯ ಮೀಸಲಿಡಬೇಕೆಂಬ ವಿಚಾರವೂ ನನ್ನ ಬಳಿ ಚರ್ಚೆ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ದುಡಿಮೆ ಪಕ್ಷಕ್ಕೆ ಬೇಕಾಗಿದ್ದು, ಆತ ರಾಜ್ಯ ಮಟ್ಟದಲ್ಲಿ ಓಡಾಡಿದ್ರೆ ಪಕ್ಷಕ್ಕೆ ಹೆಚ್ಚು ಅನುಕೂಲವಾಗುತ್ತದೆ.
ಇನ್ನು, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿಯವರು ಅಭಿವೃದ್ಧಿ ವಿಷಯವಾಗಿ ರಾಜಿಯಾಗದೇ ನನಗಿಂತಲೂ ರಾಮನಗರ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭ್ಯರ್ಥಿ ಯಾರೆಂದು ಕಾರ್ಯಕರ್ತರು, ಸ್ಥಳೀಯ ಮುಖಂಡರು ತೀರ್ಮಾನಿಸಲಿದ್ದಾರೆಂದು ಇದೇ ವೇಳೆ ತಿಳಿಸಿದರು.
ವರದಿ: ಅರ್ಕೇಶ್ ಎಸ್. ರಾಮನಗರ
PublicNext
24/07/2022 09:40 pm