ಬೆಳಗಾವಿ: ಈ ವರ್ಷದ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ನಿರ್ಧಾರವೇ ಮತಾಂತರ ನಿಷೇಧ ಮಸೂದೆಯಾಗಿತ್ತು. ಆದರೆ ಈ ಮಸೂದೆ ಮಂಡನೆ ಈ ವರ್ಷದಲ್ಲಿ ಆಗುತ್ತಿಲ್ಲ. ಬದಲಿಗೆ ಮುಂದಿನ ವರ್ಷದಲ್ಲಿ ಆಗಲಿದೆ ಎಂದು ಸರ್ಕಾರದ ಪರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಇಂದು ಮಂಡಿಸುವ ನಿರ್ಧಾರದಿಂದ ಬಿಜೆಪಿ ಹಿಂದೆ ಸರಿದಿದೆ. ಪ್ರತಿಪಕ್ಷಗಳ ವಿರೋಧದಿಂದಾಗಿ ಕಾದು ನೋಡುವ ತಂತ್ರ ಅನುಸರಿಸಿದ್ದ ಬಿಜೆಪಿ ಸರ್ಕಾರ ಮಸೂದೆ ಮಂಡನೆ ದಿನವನ್ನು ಮುಂದೂಡಿದೆ.
ವಿಧಾನಸಭೆಯಲ್ಲಿ ಬಹುಮತದ ಆಧಾರದಲ್ಲಿ ಅಂಗೀಕಾರ ಆಗಿದೆ. ಆದರೆ ವಿಧಾನ ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಕಾರಣ ಮತಾಂತರ ನಿಷೇಧ ಮಸೂದೆ ಮಂಡನೆಗೆ ಮೀನಾಮೇಷ ಎಣಿಸುತ್ತಿದೆ.
ಇಂದು ಮಸೂದೆಯನ್ನು ಮಂಡಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ನಿಲುವು ಬದಲಿಸಲಾಗಿದೆ. ಮಸೂದೆಯನ್ನು ಜನವರಿಯಲ್ಲಿ ಮಂಡಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
PublicNext
24/12/2021 05:44 pm