ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಕ್‌ಡೌನ್ ವೇಳೆ 23.6 ಲಕ್ಷ ಉದ್ಯೋಗ ನಷ್ಟ: ಕೇಂದ್ರ ಸರ್ಕಾರದ ಸಮೀಕ್ಷೆ

ನವದೆಹಲಿ: ಕೊರೊನಾ ಮೊದಲನೇ ಅಲೆಯಿಂದ ಲಾಕ್ ಡೌನ್ ಹೇರಿದ್ದ ಅವಧಿಯಲ್ಲಿ ಭಾರತದಲ್ಲಿ 23.6 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಮಾಹಿತಿ ಬಹಿರಂಗವಾಗಿದೆ.

ಲಾಕ್‌ಡೌನ್‌ ಹೇರಿದ್ದ ಮಾರ್ಚ್-ಜೂನ್ ಅವಧಿಯಲ್ಲಿ ದೇಶದ ಕೃಷಿಯೇತರ 9 ಪ್ರಮುಖ ವಲಯಗಳಲ್ಲಿ 23.6 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ಸಮೀಕ್ಷೆ ತಿಳಿಸಿದೆ.

ಸಮೀಕ್ಷೆ ನಡೆಸಿದ ಅವಧಿಯಲ್ಲಿ 9 ವಲಯಗಳಲ್ಲಿ 3.07 ಕೋಟಿ ಜನರು ಕೆಲಸ ಮಾಡುತ್ತಿದ್ದರು. ಈ ಪೈಕಿ 2.17 ಕೋಟಿ ಪುರುಷರು ಮತ್ತು 90 ಲಕ್ಷ ಮಹಿಳೆಯರಿದ್ದರು. ಆದರೆ ಲಾಕ್‌ಡೌನ್ ಬಳಿಕ ಅಂದರೆ ಜೂನ್ 1ರ ಮಾಹಿತಿ ಪ್ರಕಾರ, 2.01 ಕೋಟಿ ಪುರುಷರು ಮತ್ತು 83.3 ಲಕ್ಷ ಮಹಿಳೆಯರು ಕೆಲಸ ಮಾಡುತ್ತಿದ್ದರು ಎಂದು ಕೇಂದ್ರ ಸರ್ಕಾರದ ತ್ರೈಮಾಸಿಕ ಉದ್ಯೋಗ ಸಮೀಕ್ಷೆ ತಿಳಿಸಿದೆ.

Edited By : Nagaraj Tulugeri
PublicNext

PublicNext

28/09/2021 09:03 am

Cinque Terre

70.42 K

Cinque Terre

3

ಸಂಬಂಧಿತ ಸುದ್ದಿ