ಹೈದ್ರಾಬಾದ್: ಶಾಸಕ ಮದ್ದಿಸೆಟ್ಟಿ ವೇಣುಗೋಪಾಲ್ ಅವರ ಹುಟ್ಟು ಹಬ್ಬದ ಅಂಗವಾಗಿ ವೈಎಸ್ಆರ್ ಕಾಂಗ್ರೆಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಲವು ಯುವತಿಯರು ಅಶ್ಲೀಲ ನೃತ್ಯ ಮಾಡಿರುವ ಘಟನೆ ನಡೆದಿದೆ. ಕಾರ್ಯಕ್ರಮ ನಡೆದ ಸ್ಥಳದ ಪಕ್ಕದಲ್ಲಿಯೇ ಪೋಲಿಸ್ ಠಾಣೆ ಇದ್ದರೂ ಕಂಡು ಕಾಣದಂತೆ ಇರುವುದು ಸದ್ಯ ಪ್ರಕರಣ ಭಾರಿ ವಿದಾದಕ್ಕೆ ಎಡೆಮಾಡಿ ಕೊಟ್ಟಿದೆ.
ಪ್ರಕಾಶಂ ಜಿಲ್ಲೆಯ ದಾರ್ಶಿ ಕ್ಷೇತ್ರದ ಶಾಸಕ ಮದ್ದಿಸೆಟ್ಟಿ ವೇಣುಗೋಪಾಲ್ ಅವರ ಹುಟ್ಟು ಹಬ್ಬ ಇತ್ತು. ಹುಟ್ಟು ಹಬ್ಬದ ಅಂಗವಾಗಿ ನೃತ್ಯ ಕಾರ್ಯಕ್ರಮ ನಡೆಯುತ್ತಿತ್ತು. ಮಿಡ್ ನೈಟ್ ಶಾಸಕ ಕೇಕ್ ಕಟ್ ಮಾಡಿದ ಬಳಿಕ ನೃತ್ಯ ಕಾರ್ಯಕ್ರಮ ಮತ್ತಷ್ಟು ಜೋರಾಯಿತು.
ಇನ್ನು ವೈಎಸ್ಆರ್ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮದಲ್ಲೇ ಇದ್ದರೂ ತಡೆಯಲು ಮುಂದಾಗಿಲ್ಲ. ಇಷ್ಟೆಲ್ಲ ಆದರೂ ಪೋಲಿಸರು ಪಕ್ಕದಲ್ಲೇ ಇದ್ದರೂ ಬಂದು ತಡೆಯಲು ಮುಂದಾಗಿಲ್ಲ. ಸದ್ಯ ಇದರ ವಿಡಿಯೋ ಪೋಟೊ ವೈರಲ್ ಆಗುತ್ತಿವೆ. ಇದರಿಂದ ಪ್ರತಿಕ್ಷಗಳು ಭಾರಿ ಟೀಕೆ ಮಾಡುತ್ತಿವೆ ಎಂದು ತಿಳಿದು ಬಂದಿದೆ.
PublicNext
04/08/2022 04:56 pm