ಮೈಸೂರು: ಸಾಧನೆಗೆ ವಯಸ್ಸಿನ ಹಂಗಿಲ್ಲ ಎನ್ನುವುದನ್ನು ಮೈಸೂರಿನ ಕೆಆರ್ ನಗರದ ಶಾಸಕ ಸಾ.ರಾ ಮಹೇಶ್ ಅವರ ಪತ್ನಿ ಅನಿತಾ ಮತ್ತೊಮ್ಮೆ ಸಾಭೀತು ಮಾಡಿದ್ದಾರೆ.
ಬರೋಬ್ಬರಿ 30 ವರ್ಷದ ಬಳಿಕ ಪಿಯು ಪರೀಕ್ಷೆ ಪಾಸಾಗುವ ಮೂಲಕ ಅನಿತಾ ಇತರರಿಗೂ ಮಾದರಿಯಾಗಿದ್ದಾರೆ.ಸಾ.ರಾ ಮಹೇಶ್ ಅವರ ಪತ್ನಿ ಅನಿತಾ 1993ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದರು. ಬಳಿಕ ವಿದ್ಯಾಭ್ಯಾಸ ಮುಂದುವರಿಸಿರಲಿಲ್ಲ. ಇದೀಗ 30 ವರ್ಷಗಳ ಬಳಿಕ ಪಿಯುಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.
ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದ ಅನಿತಾ 416 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
PublicNext
18/06/2022 10:36 pm