ಲಕ್ನೋ: ಉತ್ತರ ಪ್ರದೇಶದ ಬುಲಂದ್‌ಶಹರ್ ಸದರ್‌ನ ಬಿಜೆಪಿ ಶಾಸಕ ಪ್ರದೀಪ್ ಚೌಧರಿ ಅವರ 80 ವರ್ಷದ ತಾಯಿ ಸಂತೋಷಾ ದೇವಿ ಮೇಲೆ ನಡುರಸ್ತೆಯಲ್ಲಿಯೇ ಕಳ್ಳರು ಹಲ್ಲೆ ಮಾಡಿ ಕಿವಿಯನ್ನು ಹರಿದು ಎರಡೂ ಕಿವಿಯಲ್ಲಿದ್ದ ಕಿವಿಯೋಲೆಗಳನ್ನು ಕದ್ದು ಪರಾರಿಯಾಗಿದ್ದಾರೆ.
ಈ ಘಟನೆಯು ಗಾಜಿಯಾಬಾದ್‌ನ ಪ್ರತಾಪ್ ವಿಹಾರ್‌ನಲ್ಲಿ ನಡೆದಿದೆ. ಸಂತೋಷಾ ದೇವಿ ಅವರು ಮಂಗಳವಾರ ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮೊದಲು ಪಿಸ್ತೂಲ್‌ನಿಂದ ಹೆದರಿಸಿದ್ದಾರೆ. ಆ ಬಳಿಕ ಆಕೆಯ ಕಿವಿಯಲ್ಲಿದ್ದ ಕಿವಿಯೋಲೆಗಳನ್ನು ಕೀಳುವ ಪ್ರಯತ್ನ ಮಾಡಿದ್ದಾರೆ. ಆದರೆ ಕಿವಿಯೋಲೆಗಳು ಬರದೇ ಇದ್ದಾಗ ದುಷ್ಕರ್ಮಿಗಳು ಕಟರ್‌ನಿಂದ ಆಕೆಯ ಎರಡೂ ಕಿವಿಯನ್ನು ಕತ್ತರಿಸಿ ಕಿವಿಯೋಲೆಯನ್ನು ಕದ್ದುಕೊಂಡು ಹೋಗಿದ್ದಾರೆ.
ಬಳಿಕ ಸಂತೋಷಾ ದೇವಿ ಅವರ ಚೀರಾಟ ಕೇಳಿ ಅಲ್ಲಿಗೆ ಧಾವಿಸಿದ ಸ್ಥಳೀಯರು ರಕ್ತಸ್ರಾವವಾಗುತ್ತಿರುವುದನ್ನು ಕಂಡು ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ಪೊಲೀಸರು ಸಂತೋಷ್ ದೇವಿ ಅವರಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
PublicNext
14/09/2022 07:57 am