ಬೆಂಗಳೂರು: ಪಿಎಸ್ ಐ ನೇಮಕಾತಿ ಪ್ರಕರಣದಲ್ಲಿ ಡಿವೈಎಸ್ಪಿ ಶಾಂತಕುಮಾರ್ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಙಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ಡಿವೈಎಸ್ಪಿ ಶಾಂತಕುಮಾರ್ ಬಂಧನವಾಗಿಲ್ಲ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ, ಸೂಕ್ತ ಸಾಕ್ಷ್ಯ ಗಳು ಸಿಕ್ಕಿದ್ರೆ ಅರೆಸ್ಟ್ ಮಾಡ್ತಿವಿ ಎಂದು ಸ್ಫಷ್ಟಪಡಿಸಿದ್ದಾರೆ.
ಈ ಹಿಂದೆ ಅರೆಸ್ಟ್ ಆಗಿದ್ದ ಸಿಬ್ಬಂದಿ ಗಳ ವಿಚಾರಣೆಯಲ್ಲಿ ಕೆಲವೊಂದು ಮಾಹಿತಿಗಳು ಸಿಕ್ಕಿವೆ ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ಶಾಂತಕುಮಾರ್ ರನ್ನು ವಿಚಾರಣೆ ನಡೆಸಲಾಗುತ್ತಿದೆ. ಎಕ್ಸಾಂ ನ ಪ್ರತಿಯೊಂದು ಸೆಂಟರ್ ನಲ್ಲೂ ಪೊಲೀಸರು ಕೆಲಸ ಮಾಡಿದ್ರು. ಹಾಗಾಗಿ ಅಲ್ಲಿ ಯಾರೆಲ್ಲಾ ಕೆಲಸ ಮಾಡಿದ್ರು, ಅವರನ್ನೆಲ್ಲಾ ಕರೆದು ವಿಚಾರಣೆ ಮಾಡಲಾಗುತ್ತಿದೆ ಎಂದರು.
ಇನ್ನೂ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಜ್ಞಾನೇಂದ್ರ ನಾನು ಯಾವತ್ತೂ ಸಚಿವ ಸ್ಥಾನ ನೀಡುವಂತೆ ಯಾರ ಬೆನ್ನುಬಿದ್ದಿಲ್ಲ,ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಆದಿಯಾಗಿ ಎಲ್ಲರು ಸೇರಿ ನಮಗೆ ಸಚಿವ ಸ್ಥಾನ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಕ್ಕರು ಅಷ್ಟೇ, ಸಿಗದಿದ್ರು ಅಷ್ಟೇ ಯಾರ ಬಳಿಯೂ ಹೋಗಲ್ಲ ಮೊನ್ನೆ ದೆಹಲಿಗೆ ಹೋಗಿದ್ದು ತೀರ ವೈಯಕ್ತಿಕ ವಿಚಾರಕ್ಕೆ, ಯಾವುದೇ ನಾಯಕರನ್ನು ಭೇಟಿ ಮಾಡಿಲ್ಲ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರು ಬದ್ಧ ಎಂದು ನಿರಾಸೆ ಮಾತುಗಳನ್ನಾಡಿದ್ದಾರೆ.
PublicNext
13/05/2022 01:16 pm