ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂತೋಷ್ ಅವರದ್ದು ಆತ್ಮಹತ್ಯೆ ಅಲ್ಲ, ನೇರಾನೇರ ಕೊಲೆ: ಸುರ್ಜೇವಾಲಾ ಆರೋಪ

ಬೆಳಗಾವಿ : ಸಂತೋಷ್‌ರದ್ದು ಆತ್ಮಹತ್ಯೆಯಲ್ಲ, ಇದು ನೇರಾನೇರ ಕೊಲೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಮೃತ ಗುತ್ತಿಗೆದಾರ ಸಂತೋಷ್‌ ಮನೆಗೆ ಭೇಟಿ ಬಳಿಕ ಮಾತನಾಡಿದ ಸುರ್ಜೇವಾಲಾ, “ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದ್ದರೂ ಸರ್ಕಾರ ಬೆಂಬಲ ನೀಡುತ್ತಿದೆ. ಆರೋಪಿ ಈಶ್ವರಪ್ಪ ಬೆಂಬಲಕ್ಕೆ ಸಿಎಂ, ಸರ್ಕಾರ ನಿಂತಿದೆ. ಭ್ರಷ್ಟಾಚಾರದಲ್ಲಿ ಸಿಎಂ ಬೊಮ್ಮಾಯಿ ಸಹ ಶಾಮೀಲಾಗಿದ್ದಾರೆ. ಆರೋಪಿ ಸಚಿವ ಈಶ್ವರಪ್ಪರನ್ನು ಕೂಡಲೇ ಜೈಲಿಗೆ ಹಾಕಲಿ. ಬಿಜೆಪಿ ಸರ್ಕಾರದ ಅಂತ್ಯ ಆರಂಭವಾಗಿದೆ” ಎಂದು ಕಿಡಿಕಾರಿದರು.

Edited By : Nagaraj Tulugeri
PublicNext

PublicNext

13/04/2022 07:50 pm

Cinque Terre

59.12 K

Cinque Terre

15

ಸಂಬಂಧಿತ ಸುದ್ದಿ