ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಸುಪಾರಿ ಮಾತುಕತೆ' ವೀಡಿಯೊ ಪೊಲೀಸರಿಗೆ ಕೊಟ್ಟಿದ್ದೇನೆ: ಶಾಸಕ ಎಸ್. ಆರ್. ವಿಶ್ವನಾಥ್

ಯಲಹಂಕ: ತನ್ನ ಕೊಲೆ ಸಂಚು ವಿಚಾರಕ್ಕೆ ಸಂಬಂಧಿಸಿ ಇಂದು ರಾಜಾನುಕುಂಟೆ ಪೊಲೀಸ್ ಠಾಣೆಗೆ ಬಂದ ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಪೂರ್ತಿ ವೀಡಿಯೊ ಮತ್ತು ಸಂಬಂಧಿತ ಪೆನ್ ಡ್ರೈವ್ ಪೊಲೀಸರಿಗೆ ನೀಡಿದರು.

ಈ ಸಂದರ್ಭ ಮಾತನಾಡಿದ ಶಾಸಕರು, ದೊಡ್ಡಬಳ್ಳಾಪುರ ಉಪ ಉಪವಿಭಾಗದ ಡಿವೈಎಸ್ಪಿ ನಾಗರಾಜ್ ವಿಚಾರಣೆಗೆ ಕರೆದ ಹಿನ್ನೆಲೆಯಲ್ಲಿ ಇಂದು ಬಂದಿರುವೆ.ಕುಳ್ಳ ದೇವರಾಜ್ ಕೊಟ್ಟ ಕ್ಷಮಾಪಣೆ ಪತ್ರ ಮತ್ತು ವೀಡಿಯೊ ಕೊಟ್ಟಿದ್ದೇನೆ. ವೀಡಿಯೊ ಹೇಗೆ ಸಿಕ್ಕಿದೆ ಎನ್ನುವುದರ ಬಗ್ಗೆಯೂ ಮಾಹಿತಿ ನೀಡಿರುವೆ. ಕುತೂಹಲಕ್ಕೆ ಪೂರ್ತಿ ವೀಡಿಯೊ ನೋಡಿದ ನಂತರ ಪೆನ್ ಡ್ರೈವ್ ನೋಡಿದಾಗ ಏನೇನೋ ವ್ಯವಹಾರ ಇತ್ತು. ಹೀಗಾಗಿ ರಾತ್ರಿಯೆಲ್ಲ ಕುಳಿತುಕೊಂಡು ಸುಪಾರಿ ವಿಚಾರದ ಮಾತುಕತೆಯ ವೀಡಿಯೊ ಮಾತ್ರ ತೆಗೆದುಕೊಂಡಿದ್ದೇವೆ. ಇಂದು ಎಲ್ಲ ವಿಡಿಯೋ ಕೊಟ್ಟಿದ್ದೇನೆ ಎಂದರು.

ಶ್ರೇಯಸ್ ಹೋಟೆಲ್ ನಲ್ಲಿ ಮೂರು ಜನ ಇದ್ರು ಅಂತ ಗೊತ್ತಾಯ್ತು. ಹೊರಗಡೆ ನಾಲ್ಕೈದು ಜನ ಇದ್ದಾರೆ ಅಂತ ಗೊತ್ತಾಗ್ತಿದೆ.ಕುಳ್ಳ ದೇವರಾಜ್ ಜೊತೆಗೆ ಸಂಬಂಧ ಇರುವ ಬಗ್ಗೆ ಪ್ರಶ್ನೆ ಮಾಡಿದಾಗ, ನಾನು ಕುಳ್ಳ ದೇವರಾಜ್ ನನ್ನು ಯಾಕೆ ಭೇಟಿ ಮಾಡಲಿ ಎಂದರು.

ಎಫ್ ಐಆರ್ ಆದ ತಕ್ಷಣ ಬಂಧನ ಅಷ್ಟೇ ಅಲ್ಲ, ತನಿಖೆ ಆಗಬೇಕಿದೆ.ಗೋಪಾಲಕೃಷ್ಣ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್,

ಅವನೇ ಸುಳ್ಳು. ನನ್ನ ಕೊಲೆ ಸಂಚು ಬಹಳ ದಿನದಿಂದ ನಡೀತಿದೆ... ನಾನು ಕೂಡ ಅಸಡ್ಡೆ ಮಾಡಿದೆ ಅನ್ಸುತ್ತೆ.ಆಡಿಯೋ ಕೇಳಿದ ಮೇಲೆಯೇ ಗೊತ್ತಾಗಿದ್ದು. ಏನೂ ಗೊತ್ತಿಲ್ದೆ ದೂರು ಕೊಡಲು ಸಾಧ್ಯವಿಲ್ಲ ಆದ್ದರಿಂದ ವೀಡಿಯೊ ಸಿಕ್ಕಿದ್ದು ಮೊನ್ನೆ ರಾತ್ರಿ 7.30 ಕ್ಕೆ. ನಿನ್ನೆಯೇ ದೂರು ನೀಡಿರುವೆ. ಹೆಚ್ಚಿನ ತನಿಖೆ ಬೇಕಾದ್ರೆ ಮಾಡೋಣ ಎಂದು ಸಿಎಂ ಸಹ ಹೇಳುತ್ತಾರೆ ಎಂದರು.

Edited By : Manjunath H D
PublicNext

PublicNext

02/12/2021 02:22 pm

Cinque Terre

69.75 K

Cinque Terre

0

ಸಂಬಂಧಿತ ಸುದ್ದಿ