ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀದಿ ನಾಡಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಕಾವು ಏರುತ್ತಿರುವಾಗಲೇ ಅಹಿತಕರ ಘಟನೆ ನಡೆಯುತ್ತಿವೆ. ಕೋಲ್ಕತ್ತಾದ ಫೂಲ್ಬಾಗನ್‌ನಲ್ಲಿ ಉತ್ತರ ಕೋಲ್ಕತ್ತಾದ ಬಿಜೆಪಿ ಜಿಲ್ಲಾಧ್ಯಕ್ಷ ಶಿಬಾಜಿ ಸಿಂಘಾ ರಾಯ್ ಹಲ್ಲೆ ನಡೆದಿದೆ.

ಈ ಗಲಭೆಯಲ್ಲಿ ಶಿಬಾಜಿ ಸಿಂಘಾ ರಾಯ್ ಅಷ್ಟೇ ಅಲ್ಲದೆ ಬಿಜೆಪಿ ನಾಯಕರಾದ ಸುವೆಂದು ಅಧಿಕಾರಿ ಹಾಗೂ ಶಂಕುದೇಬ್ ಪಾಂಡಾ ವಿರುದ್ಧವೂ ದಾಳಿ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಡಾ. ಸುಕಂತ ಮಜುಂದಾರ್, ಫೂಲ್‌ಭಾಗನ್ ಬಳಿ ಟಿಎಂಸಿ ಗೂಂಡಾಗಳು ಬಿಜೆಪಿ ನಾಯಕರ ಮೇಲೆ ಮತ್ತೊಂದು ದಾಳಿ ನಡೆಸಿದ್ದಾರೆ. ಈ ಬಾರಿ ಸುವೆಂದು ಅಧಿಕಾರಿ, ಶಂಕುದೇಬ್ ಹಾಗೂ ಶಿಬಾಜಿ ಸಿಂಘಾ ರಾಯ್ ಮೇಲೆ ಹಲ್ಲೆ ನಡೆದಿದ್ದು, ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಟಿದೆ ಎಂದು ಆರೋಪಿಸಿದ್ದಾರೆ.

Edited By : Vijay Kumar
PublicNext

PublicNext

18/02/2021 08:23 am

Cinque Terre

87.53 K

Cinque Terre

2

ಸಂಬಂಧಿತ ಸುದ್ದಿ