ನವದೆಹಲಿ: ನಾವು ಇನ್ಮುಂದೆ ಹಿಂದೂ ದೇವರುಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ನಂಬೋದಿಲ್ಲ. ಈಶ್ವರ ಅಥವಾ ಹಿಂದೂ ಧರ್ಮದ ಯಾವುದೇ ಪೂಜೆ ಮಾಡೋದಿಲ್ಲ. ರಾಮ ಹಾಗೂ ಕೃಷ್ಣನನ್ನು ದೇವರೆಂದು ನಂಬೋದಿಲ್ಲ. ಅವರನ್ನು ಪೂಜಿಸುವುದೂ ಇಲ್ಲ.
ಹೀಗೆ ನವದೆಹಲಿಯ ಆಮ್ ಆದ್ಮಿ ಸರಕಾರದ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರ ನೇತೃತ್ವದಲ್ಲಿ ಸಾವಿರಾರು ಜನ ಶಪಥ ಸ್ವೀಕರಿಸಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದ್ದು ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಸಾರ್ವಜನಿಕವಾಗಿ ಹಿಂದೂ ಧರ್ಮವನ್ನು ಅವಹೇಳನ ಮಾಡಿದ ಆಮ್ ಆದ್ಮಿ ಸಚಿವ ರಾಜೇಂದ್ರ ಪಾಲ್ ಗೌತಮ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
PublicNext
08/10/2022 12:09 pm