ಪಬ್ಲಿಕ್ ನೆಕ್ಸ್ಟ್ ವಿಶೇಷ ಸಂಪಾದಕೀಯ : ಕೇಶವ ನಾಡಕರ್ಣಿ
ನಿರ್ಲಿಪ್ತ ಮಂತ್ರಿಗಳು ಹಾಗೂ ಹೇಡಿ ಸರಕಾರದಿಂದಾಗಿ ಇಂದು ಉಡುಪಿ ಹಿಜಾಬ್ ಕಿಡಿ, ಕಾಡ್ಗಿಚ್ಚಿನಂತೆ ರಾಜ್ಯದ ಶಾಲಾ ಕಾಲೇಜುಳಿಗೆ ವ್ಯಾಪಿಸ ತೊಡಗಿದೆ.
ಸಮವಸ್ತ್ರ ನಿಯಮಾವಳಿಗೆ ಜಾತಿ, ಧರ್ಮದ ನಂಟಿದೆಯಾ? ಮಕ್ಕಳಲ್ಲಿ ಸಮಾನತೆ ಹಾಗೂ ಏಕತೆ ಮೂಡಲಿ ಎಂಬ ಉದ್ದೇಶದಿಂದ ಸರಕಾರ ಜಾರಿಗೆ ತಂದಿದೆ. ಆದರೆ ಇದಕ್ಕೆ ಜಾತಿ ಧರ್ಮದ ಬಣ್ಣ ಕಟ್ಟಿ ಕೆಲವರು ವಿವಾದ ಸೃಷ್ಟಿಸಿದ್ದಾರೆ. ಸಮವಸ್ತ್ರ ವಿವಾದ ಕಳೆದೆರಡು ತಿಂಗಳಿಂದ ನಡೆಯುತ್ತಿದ್ದರೂ ಮೂಕ ಪ್ರೇಕ್ಷಕನಂತೆ ಕುಳಿತ ಸರಕಾರಕ್ಕೆ ಏನೆನ್ನಬೇಕು?
ವಿದ್ಯಾರ್ಥಿನಿಯರ ಬೇಡಿಕೆ, ಸಮವಸ್ತ್ರ ನಿಯಮಾಳಿಗೆ ವಿರುದ್ಧವಾಗಿದೆ ಎಂದು ಖಡಕ್ಕಾಗಿ ಹೇಳುವ ಧೈರ್ಯವಿಲ್ಲವೇ ಈ ಮಂತ್ತಿಗಳಿಗೆ? ಎಲ್ಲವೂ ಗೊತ್ತಿದ್ದರೂ ಮೌನಕ್ಕೆ ಶರಣಾದ ಶಿಕ್ಷಣ ಸಚಿವರು ಈಗ ಏನೇನೋ ಬಡಬಡಿಸುತ್ತಿದ್ದಾರೆ.
ಆದರೆ ಎಡಪಂಥೀಯ ಧೋರಣೆಯನ್ನೆ ಉಸಿರಾಗಿಸಿಕೊಂಡ ಪಕ್ಕದ ಕೇರಳ ಸರಕಾರ ವಿದ್ಯಾರ್ಥಿಗಳ ಸಮವಸ್ತ್ರ ವಿಷಯದಲ್ಲಿ ಮಾಡಿದ್ದೇನು ಗೊತ್ತೆ?
ಅಲ್ಲಿಯ ಮುಸ್ಲಿಂ ಸಂಘಟನೆಗಳಿಗೆ ಕ್ಯಾರೆ ಎನ್ನದೆ ಶಿಕ್ಷಣದಲ್ಲಿ '' ಲಿಂಗ ಸಮಾನತೆ '' ಘೋಷಿಸಿ ಸರಕಾರಿ ಶಾಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ತಟಸ್ಥ ಸಮವಸ್ತ್ರ '' ನಿಯಮ ಜಾರಿಗೆ ತಂದಿದೆ. ಅಂದರೆ ಅಲ್ಲಿಯ ಎಲ್ಲ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ನೀಲಿ ಪ್ಯಾಂಟ್ ಹಾಗೂ ಶರ್ಟ್ ಧರಿಸಬೇಕು. ಬೇಕಾದವರು ಮೇಲ್ವಸ್ತ್ರ ಧರಿಸಬಹುದು ಎಂದು ಆದೇಶಿಸಿದೆ.
ಇದು ಕೇವಲ ಸರಕಾರ ಅಥವಾ ಆ ಶಿಕ್ಷಣ ಸಂಸ್ಥೆ ನಿಯಮವಲ್ಲ. ಅಲ್ಲಿಯ ವಿದ್ಯಾರ್ಥಿನಿಯರೇ ತಮಗೂ ಪ್ಯಾಂಟ್ ಶರ್ಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಕೇರಳದಲ್ಲಿ ಜಾರಿಯಾದ ನಿಯಮವನ್ನು ಪ್ರಶ್ನಿಸುವ ಧೈರ್ಯವಿಲ್ಲದ ಮುಸ್ಲಿಂ ನಾಯಕರು ಕರ್ನಾಟಕದಲ್ಲಿ ಹಿಜಾಬ್ ಹೋರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದನ್ನು ವಿರೋಧಿಸುವುದಾದರೆ ಹೋಗ ಕೇರಳಕ್ಕೆ, ಅಲ್ಲಿಯ ಸರಕಾರದ ವಿರುದ್ಧ ಹೋರಾಡಿ.
ನಾವು ಹಿಜಾಬ್ ಧರಿಸಿಯೇ ಬರುತ್ತೇವೆ ಎಂದು ಉಡುಪಿ ಕಾಲೇಜಿನ್ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಮೊಂಡುತನ. ಅವರು ಹಜಾಬ್ ಧರಿಸಿದರೆ ನಾವು ಕೇಸರಿ ಶಾಲು ವಸ್ತ್ರ ಧರಿಸಿ ಕಾಲೇಜಿಗೆ ಬರುತ್ತೇವೆ ಎಂದು ಹಿಂದು ವಿದ್ಯಾರ್ಥಿಗಳ ಪಟ್ಟು. ದಿನ ಕಳೆದಂತೆ ವಿವಾದ ಮತ್ತಷ್ಟು ಕಗ್ಗಂಟಾಗ ತೊಡಗಿದೆ. ಒಟ್ಟಾರೆ ಆಯಾ ಕಾಲೇಜುಗಳ ಪ್ರಾಂಶುಪಾಲರು ಇಕ್ಕಟ್ಟಿಗೆ ಸಿಲುಕಬೇಕಾಗಿದೆ.
ಈಗ ಇದು ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿದೆ. ಅಲ್ಲಿ ಏನಾಗುತ್ತೋ ಗೊತ್ತಿಲ್ಲ, ಆದರೆ ಇದಕ್ಕೆಲ್ಲ ಕಾರಣ ಸರಕಾರದ ನಿರ್ಲಕ್ಷ ಧೋರಣೆ ಎಂದು ಮತ್ತೇ ಮತ್ತೇ ಹೇಳಬೇಕಾಗಿದೆ.
ಇಷ್ಟೇ ಅಲ್ಲ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಾಕ್ ಪ್ರೇಮಿ ಮೆಹಬೂಬಾ ಮುಫ್ತಿ " ಕರ್ನಾಟಕದಲ್ಲಿ ಮುಸ್ಲಿಂ ಮಹಿಳೆಯರ ಹಕ್ಕು ಕಿತ್ತಿಕೊಳ್ಳಲಾಗುತ್ತಿದೆ. ಇದು ಖಂಡನೀಯ ಎಂದು ಬೊಬ್ಬೆ ಹಾಕಿದ್ದಾಳೆ. ಇವಳ ಪಕ್ಷದ ಕೃಪಾ ಪೋಷಿತ ಪಾಕ್ ಉಗ್ರಗಾಮಿಗಳು ಅಮಾಯಕ ಕಾಶ್ಮೀರಿ ಹಿಂದೂ ಮುಸ್ಲಿಂ ನಾಗರಿಕರನ್ನು ಗುಂಡಿಕ್ಕಿ ಕೊಂದಾಗ ಚಕಾರ ಶಬ್ದವೆತ್ತದ ಈಕೆ ಈಗ ಕರ್ನಾಟಕದ ಹಿಜಾಬ್ ವಿವಾದದಲ್ಲಿ ಮೂಗು ತೂರಿಸಲು ಬಂದಿದ್ದಾಳೆ.
ಎಂದಿನಂತೆ ಹಿಂದೂಗಳನ್ನು ವಿರೋಧಿಸುತ್ತ ಬಂದಿರುವ ಕಾಂಗ್ರೆಸ್ ನಾಯಕರು ಈಗ ಹಿಜಾಬ್ ಪರವಾಗಿ ಆಖಾಡಕ್ಕೆ ಇಳಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಮುಸ್ಲಿಂ ವಿದ್ಯಾರ್ಥಿನಿಯರು ಮೊದಲಿನಿಂದಲೂ ಹಿಜಾಬ್ ಹಾಕುತ್ತಿದ್ದಾರೆ ಹಿಂದುಗಳು ಕೇಸರಿ ಶಾಲು ಹಾಕುತ್ತಿದ್ದರೆ? ಇದು ಮುಸ್ಲಿಂ ಸಮುದಾಯವನ್ನು ತುಳಿಯುವ ಬಿಜೆಪಿ ಸರಕಾರದ ಹುನ್ನಾರ '' ಎಂದಿದ್ದಾರೆ. ಹೌದು ಇನ್ನು ಆ ಸಮುದಾಯವನ್ನು ಓಲೈಸದಿದ್ದರೆ ಪಾಪ ಕಾಂಗ್ರೆಸ್ಸಿಗೆ ಯಾರು ಓಟು ಹಾಕಬೇಕು?
ಇದು ಇಷ್ಟಕ್ಕೆ ಸೀಮಿತವಾಗಿಲ್ಲ. ಶಾಲಾ ಕಾಲೇಜುಗಳಲ್ಲಿ ಹಿಂದುಗಳು ಗಣೇಶ ಪೂಜೆ ಮಾಡುವುದಿಲ್ಲವೆ ಅಲ್ಲಿ ಗಣೇಶನ ಪ್ರತಿಮೆ ಏಕೆ? ಎಂದು ಕೆಲವು ಮುಸ್ಲಿಂ ಸಂಘಟನೆಗಳು ಹಾಗೂ ಬುದ್ಧಿಜೀವಿಗಳು ವಿತಂಡ ವಾದ ಮಾಡುವ ಮಟ್ಟಕ್ಕೂ ಹೋಗಿದ್ದಾರೆ.
ಬುದ್ಧಿ ಜೀವಿಗಳೆ ಇದು ಭಾರತ, ಗಣೇಶ ಪೂಜೆಯನ್ನು ಇಲ್ಲಿ ಮಾಡದೆ ಪಾಕಿಸ್ತಾನದಲ್ಲಿ ಮಾಡುತ್ತೀರಾ? ಇದೇ ಪ್ರತಿಮೆ ಹಾಗೂ ಗಣೇಶೋತ್ಸವ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ್ದು. ಭಾರತೀಯ ಸಂಸ್ಕೃತಿ ಪ್ರತೀಕ, ಭಾರತ ದೇಶ ಗಣೇಶನೊಂದಿಗೆ ಉದಯಿಸಿದೆ ಎಂಬುದನ್ನು ಮರೆಯಬಾರದು
PublicNext
04/02/2022 05:47 pm