ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಗವಾಡ: ಶೇತ್ಕರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ಉದ್ಘಾಟಿಸಿದ ಚಿದಾನಂದ ಸವದಿ

ಕಾಗವಾಡ: ಸಹಕಾರಿ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಸಾಲ ನೀಡುವಾಗ ಯಾವುದೇ ಜಾತಿ, ಮತ, ಪಂಥ, ಭಾಷೆಯೆಂಬ ಭೇದ-ಭಾವ ವೆಸಗದೇ ಎಲ್ಲರಿಗೂ ಸಾಲ ನೀಡಿ, ಅವರ ಆರ್ಥಿಕ ಪ್ರಗತಿಗೆ ಸಹಕರಿಸುವಂತೆ ಅಥಣಿಯ ಯುವ ನಾಯಕ ಚಿದಾನಂದ ಸವದಿ ಕರೆ ನೀಡಿದರು.

ಅವರು ದಿ. 21 ರಂದು ಕಾಗವಾಡ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಿಸಲಾದ ಶೇತ್ಕರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಾ ಮುಂದೆ ಮಾತನಾಡುತ್ತ ಸಂಘವು ಸದಸ್ಯರಿಗೆ ಪ್ರಥಮ ಹಂತದಲ್ಲಿ 30 ಲಕ್ಷ ರೂಪಾಯಿ ಸಾಲ ವಿತರಿಸುತ್ತಿರುವುದು ಶ್ಲಾಘನೀಯವಾಗಿದೆ. ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿ, ಸಂಘದ ಹಾಗೂ ತಮ್ಮ ಏಳಿಗೆಗೆ ಸಹಕರಿಸುವಂತೆ ರೈತ ಸದಸ್ಯರಿಗೆ ಹೇಳಿದರು.

ಸಹಕಾರಿ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಇವರಲ್ಲೆರ ಸಹಕಾರದಿಂದ ನಮ್ಮ ತಂದೆಯವರಾದ ಲಕ್ಷ್ಮಣ ಸವದಿಯವರು ಕಳೆದ 30 ವರ್ಷಗಳಿಂದ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಸುಮಾರು 144 ಸಹಕಾರಿ ಸಂಘಗಳು ಆರೋಗ್ಯಕರವಾಗಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಅವರದ್ದಾಗಿದೆ. ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾದ ಬೆಳಗಾವಿ ಸಾಲಮನ್ನಾ ಯೋಜನೆಯಲ್ಲಿ ಅತ್ಯಧಿಕ ರೈತರು ಲಾಭ ಪಡೆದುಕೊಂಡ ಜಿಲ್ಲೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಾಂದರ್ಭಿಕವಾಗಿ ಹಲವು ರೈತರಿಗೆ ಪತ್ತಿನ ಪತ್ರವನ್ನು ವಿತರಣೆ ಮಾಡಿದರು.

Edited By : Nagaraj Tulugeri
PublicNext

PublicNext

22/07/2022 01:27 pm

Cinque Terre

20.96 K

Cinque Terre

0

ಸಂಬಂಧಿತ ಸುದ್ದಿ