ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಷ್ಠಿತ ಲೀಜನ್ ಆಫ್ ಮೆರಿಟ್ ಪದಕ ನೀಡಿ ಗೌರವಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪರವಾಗಿ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ತರಣ್ ಜೀತ್ ಸಿಂಗ್ ಸಂಧು ಅವರು ಈ ಪದಕವನ್ನು ಸ್ವೀಕರಿಸಿದ್ದಾರೆ.
ಉಭಯ ದೇಶಗಳ ಕಾರ್ಯತಂತ್ರದ ಸಹಭಾಗಿತ್ವ ಹೆಚ್ಚಿಸುವಲ್ಲಿ ನಾಯಕತ್ವ ವಹಿಸಿದ್ದಕ್ಕೆ ಹಾಗೂ ಜಾಗತಿಕ ಶಕ್ತಿಯಾಗಿ ಭಾರತ ಹೊರಹೊಮ್ಮುವಂತೆ ಮಾಡಿದ್ದಕ್ಕೆ ಟ್ರಂಪ್ ಈ ಪದಕವನ್ನು ನೀಡಿ ಗೌರವಿಸಿದ್ದಾರೆ.
PublicNext
23/12/2020 12:44 pm