ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾಗೆ ಇಡಿ ಶಾಕ್- 12 ಕೋಟಿ ಆಸ್ತಿ ವಶಕ್ಕೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ಹಾಗೂ 35ಎ ವಿಧಿಯನ್ನು ಮರುಸ್ಥಾಪಿಸಲು ವಿವಿಧ ಪಕ್ಷಗಳ ಮುಂದಾಳತ್ವ ವಹಿಸಿರುವ ನ್ಯಾಷನಲ್ ಕಾನ್ಫೆರನ್ಸ್ ಅಧ್ಯಕ್ಷ, ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದೆ.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿರುವ 83 ವರ್ಷದ ಫಾರೂಕ್ ಅಬ್ದುಲ್ಲಾ ಅವರ 12 ಕೋಚಿ ರೂ. ಮೌಲ್ಯದ ಆಸ್ತಿಯನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ (ಜೆಕೆಸಿಎ)ಯ ಹಣ ವರ್ಗಾವಣೆಯಲ್ಲಿ 43.69 ಕೋಟಿ ಹಣ ದುರುಪಯೋಗಪಡಿಸಿಕೊಂಡ ಗಂಭೀರ ಆರೋಪ ಫಾರೂಕ್ ಅಬ್ದುಲ್ಲಾ ಮೇಲಿದೆ. 2002-11ರ ನಡುವೆ ಹಣ ದುರುಪಯೋಗ ಮಾಡಿದ ಆರೋಪದ ಮೇಲೆ ಇಡಿ ತನಿಖೆ ತೀವ್ರಗೊಳಿಸಿದೆ.

ಪ್ರಕರಣದ ಹಿನ್ನೆಲೆಯಲ್ಲಿ ಫೂರೂಕ್ ಅಬ್ದುಲ್ಲಾ ಅವರಿಗೆ ಸೇರಿದ ಶ್ರೀನಗರದ ಎರಡು ವಸತಿ ಮತ್ತು ವಾಣಿಜ್ಯ ಆಸ್ತಿ ಹಾಗೂ ಮೂರು ಫ್ಲಾಟ್ ಅನ್ನು ಇಡಿ ಸೀಝ್ ಮಾಡಿದೆ. ಈ ಆಸ್ತಿಗಳ ಸರ್ಕಾರಿ ಮೌಲ್ಯ 11.86 ಕೋಟಿ ರೂಪಾಯಿ ಆಗಿದೆ. ಆದರೆ ಮಾರುಕಟ್ಟೆ ಮೌಲ್ಯ 60ರಿಂದ 70 ಕೋಟಿ ರೂಪಾಯಿ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Edited By : Vijay Kumar
PublicNext

PublicNext

19/12/2020 09:16 pm

Cinque Terre

104.6 K

Cinque Terre

41

ಸಂಬಂಧಿತ ಸುದ್ದಿ