ಬೆಂಗಳೂರು: ಅವರ ವ್ಯಾಪಾರ ನನಗೇನು ಗೊತ್ತು, ಇದರ ಬಗ್ಗೆ ನಾನು ಏನೂ ಹೇಳಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಬಿಟ್ಟು ಹೋದವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಬಿಜೆಪಿ ವಲಸಿಗ ಶಾಸಕರ ಸಭೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಎಂ ಯಡಿಯೂರಪ್ಪ ಅವರ ನಾಯಕತ್ವ ಬದಲಾಗುತ್ತೋ ಇಲ್ಲವೋ ಗೊತ್ತಿಲ್ಲ. ಎಂಟಿಬಿ ನಾಗರಾಜ್, ಶಂಕರ್ ಅವರನ್ನೆಲ್ಲ ಮಂತ್ರಿ ಮಾಡಲಿ ಬಿಡಲಿ ನನಗೇನಾಬೇಕು. ವ್ಯಾಪಾರ ಮಾಡಿಕೊಂಡು ಹೋಗಿರೋರು ಅವರು. ಅವರು ಏನು ವ್ಯಾಪಾರ ಮಾಡ್ಕೊಂಡಿದ್ದಾರೋ ನನಗೇನು ಗೊತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ. ಆಗ ರಾಜ್ಯದಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗುತ್ತದೆ. ಪ್ರವಾಹ ಸೇರಿದಂತೆ ಅನೇಕ ವಿಚಾರಗಳಿವೆ. ಅಧಿವೇಶನ ಪ್ರಾರಂಭವಾದ ನಂತರ ಎಲ್ಲವನ್ನೂ ಸರ್ಕಾರದ ಗಮನಕ್ಕೆ ತರುವೆ. ಆಗ ಮಾತನಾಡುವುದನ್ನು ನೀವೇ ನೋಡುವಿರಂತೆ ಎಂದು ಹೇಳಿದರು.
PublicNext
28/11/2020 03:33 pm