ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಲಿಕಾಪ್ಟರ್ ಮೂಲಕ ಹೂ ಹಾಕಿದರು: ಆದರೆ ವೋಟ್ ಹಾಕಲಿಲ್ಲ

ಬೆಂಗಳೂರು: ಕೆಲಸ ಮಾಡದೇ ಇರುವವರನ್ನು ಜನ ಗೆಲ್ಲಿಸಿದ್ದಾರೆ. ನಾನು ಕೆಲಸ ಮಾಡಿದರೂ ನನಗೆ ವೋಟ್ ಹಾಕಲಿಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ದಾಸರಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೆರೆಯನ್ನು ನುಂಗಿದ ಅಧಿಕಾರಿಗಳು, ರಾಜಕಾರಣಿಗಳು ಹೈಫೈ ಕಾಲೋನಿ ಮಾಡಿಕೊಂಡಿದ್ದರು. ಆದರೆ ಮಳೆಗಾಲ ಬಂದಾಗ ಅಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ನನ್ನ ಅವಧಿಯಲ್ಲಿ ಇವುಗಳನ್ನು ಸರಿಪಡಿಸಿದ‌ ಕಾರಣ ಹೆಲಿಕಾಪ್ಟರ್‌ನಲ್ಲಿ ಹೂಮಳೆಗರೆದರು. ಆದರೆ ವಿಪರ್ಯಾಸ ಅಂದರೆ ಚುನಾವಣೆಯಲ್ಲಿ ಜನ ಮಾತ್ರ ನಮ್ಮನ್ನು ಗೆಲ್ಲಿಸಲೇ ಇಲ್ಲ ಎಂದು ಹೇಳಿದರು.

ನನ್ನ ಅವಧಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ರೈತರ ಸಾಲಮನ್ನಾ ಮಾಡಿದ್ದೇನೆ. ಹಲವಾರು ಯೋಜನೆಗಳನ್ನು ನೀಡಿದೆ. ಆದರೆ ಜನರು ಮಾತ್ರ ನನ್ನ ಕೈಹಿಡಿಯುತ್ತಿಲ್ಲ ಎಂದು ಕುಮಾರಸ್ವಾಮಿ ತಮ್ಮ ಅಂತರಂಗದ ಮಾತು ಬಿಚ್ಚಿಟ್ಟರು.

ಕೆಲಸ ಮಾಡಿದವರಿಗೆ ಜನ ವೋಟು ಹಾಕುವುದಿಲ್ಲ. ಏನೂ ಕೆಲಸ ಮಾಡದವರನ್ನಷ್ಟೇ ಓಟು ಹಾಕಿ ಗೆಲ್ಲಿಸುತ್ತಾರೆ. ಇದು ಇಂದಿನ ಪರಿಸ್ಥಿತಿ ಎಂದ ಕುಮಾರಸ್ವಾಮಿ ಜನರು ನಮ್ಮ ಕೈಹಿಡಿಯುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

Edited By : Nagaraj Tulugeri
PublicNext

PublicNext

22/11/2020 05:27 pm

Cinque Terre

76.25 K

Cinque Terre

13

ಸಂಬಂಧಿತ ಸುದ್ದಿ