ಅಮೇರಿಕಾ ಅಧ್ಯಕ್ಷರ ಪತ್ನಿಯ ಪಾಲಿಸಿ ಡೈರೆಕ್ಟರ್ ಆಗಿ ಮಾಲಾ ಅಡಿಗ ಆಯ್ಕೆಯಾಗಿದ್ದಾರೆ. ಉಡುಪಿ ಮೂಲದ ಮಾಲಾ ಅಡಿಗ ಅವರನ್ನು ಪತ್ನಿ ಜಿಲ್ ಬಿಡೆನ್ ಅವರ ಪಾಲಿಸಿ ಡೈರೆಕ್ಟರ್ ಆಗಿ ಯುಎಸ್ಎ ಅಧ್ಯಕ್ಷ ಜೋ ಬೈಡೆನ್ ನೇಮಕವಾಗಿದ್ದಾರೆ. ಮಾಲಾ ಅಡಿಗ ಅವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಕಕ್ಕುಂಜೆ ಮೂಲದವರಾಗಿದ್ದಾರೆ. ಮಾಲಾ ಅಡಿಗ ತಂದೆ ರಮೇಶ್ ಅಡಿಗ ಅಮೇರಿಕದಲ್ಲಿ ವೈದ್ಯರಾಗಿದ್ದಾರೆ. ಇವರ ಪೋಷಕರು ಅಮೆರಿಕದಲ್ಲಿ ಕಳೆದ ಐವತ್ತು ವರ್ಷಗಳಿಂದ ನೆಲೆಸಿದ್ದಾರೆ. ಹೀಗಾಗಿ ಮಾಲಾ ಅಡಿಗ ಅವರು ಅಮೆರಿಕದಲ್ಲಿಯೇ ಹುಟ್ಟಿ ಬೆಳೆದಿದ್ದಾರೆ.
ಕುಂದಾಪುರದ ಅಡಿಗ ಕುಟುಂಬದ ಕುಡಿ ಮಾಲಾ ಈ ಹಿಂದೆ ಬಿಡೆನ್ ಫೌಂಡೇಶನ್ ನ ಉನ್ನತ ಶಿಕ್ಷಣ ನಿರ್ದೇಶಕಿಯಾಗಿದ್ದರು. ಅದಕ್ಕೂ ಮುನ್ನ ಬರಾಕ್ ಒಬಾಮಾಗೆ ಶಿಕ್ಷಣ, ಸಾಂಸ್ಕೃತಿಕ ವಿಭಾಗದ ಉಪ ಸಹಾಯಕ ಕಾರ್ಯದರ್ಶಿಯಾಗಿದ್ದರು. ಸದ್ಯ ಅಮೇರಿಕಾದ ನ್ಯಾಶನಲ್ ಸೆಕ್ಯೂರಿಟಿ ಸ್ಟಾಫ್ ನಲ್ಲಿ ಮಾನವ ಹಕ್ಕುವಿಭಾಗದ ನಿರ್ದೇಶಕಿಯಾಗಿದ್ದಾರೆ.
PublicNext
22/11/2020 12:29 am