ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣೆ ಹಿಡಿದಿದ್ದಾರೆ.
ಬಿಜೆಪಿ ಸಹಯೋಗದೊಂದಿಗೆ ಸರ್ಕಾರ ರಚಿಸಿರುವ ನಿತೀಶ್ ಸೋಮವಾರ ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇದೇ ವೇಳೆ ನಿತೀಶ್ ಕುಮಾರ್ ಜೊತೆ 13 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಲ್ಲಿ ಬಿಜೆಪಿ ಮೇಲಗೈ ಸಾಧಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿತ್ತು. ಬಿಜೆಪಿ 74 ಸ್ಥಾನಗಳನ್ನು , ಜೆಡಿಯು 43 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಆದರೆ ಚುನಾವಣಾ ಪೂರ್ವ ಒಪ್ಪಂದದಂತೆ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಗೆ ಬಿಟ್ಟುಕೊಟ್ಟ ಬಿಜೆಪಿ ಸಚಿವ ಸಂಪುಟದಲ್ಲಿ ಹಿಡಿತ ಸಾಧಿಸಿದೆ.
ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಸುಶೀಲ್ ಮೋದಿ ಅವರಿಗೆ ಈ ಬಾರಿ ಸ್ಥಾನ ನೀಡಲಾಗಿಲ್ಲ. ಬದಲಾಗಿ ಅವರಿಗೆ ಕೇಂದ್ರ ಮಟ್ಟದಲ್ಲಿ ಉತ್ತಮ ಸ್ಥಾನಮಾನ ನೀಡಲಾಗುವುದು ಎಂದು ಬಿಜೆಪಿ ಉಸ್ತುವಾರಿ ದೇವೆಂದ್ರ ಫಡ್ನವೀಸ್ ಹೇಳಿದ್ದಾರೆ.
ಬಿಹಾರದಲ್ಲಿ ಈ ಬಾರಿ ಬಿಜೆಪಿಯ ತಾರಕಿಶೋರ್ ಪ್ರಸಾದ್ ಮತ್ತು ರೇಣುದೇವಿ ಅವರನ್ನು ಡಿಸಿಎಂ ಮಾಡಲಾಗುತ್ತದೆ ಎನ್ನಲಾಗಿದೆ.
ನಿತೀಶ್ ಸಂಪುಟದ ಸದಸ್ಯರು
ತಾರಕಿಶೋರ್ ಪ್ರಸಾದ್ (ಬಿಜೆಪಿ)
ರೇಣು ದೇವಿ (ಬಿಜೆಪಿ)
ಬಿಜೇಂದ್ರ ಪ್ರಸಾದ್ ಯಾದವ್ (ಜೆಡಿಯು)
ಅಶೋಕ್ ಕುಮಾರ್ ಚೌಧರಿ (ಜೆಡಿಯು)
ಮೇವಾ ಲಾಲ್ ಚೌಧರಿ (ಜೆಡಿಯು)
ಶೀಲಾ ಮಂಡಲ್ (ಜೆಡಿಯು)
ಸಂತೋಷ್ ಮಾಂಜಿ (ಎಚ್ಎಎಂ)
ಮುಖೇಶ್ ಸಹಾನಿ (ವಿಐಪಿ)
ಮಂಗಲ್ ಪಾಂಡೆ (ಬಿಜೆಪಿ)
ಅಮರೇಂದ್ರ ಪ್ರತಾಪ್ ಸಿಂಗ್ (ಬಿಜೆಪಿ)
ರಾಂಪ್ರಿತ್ ಪಾಸ್ವಾನ್ (ಬಿಜೆಪಿ)
ಜೀವೇಶ್ ಮಿಶ್ರಾ (ಬಿಜೆಪಿ)
ರಾಮ್ ಸೂರತ್ ರೈ (ಬಿಜೆಪಿ)
PublicNext
17/11/2020 10:02 am