ಪಟನಾ : ಅಧಿಕಾರಕ್ಕಾಗಿ ನಿತ್ಯ ಹಪಹಪಿಸುತ್ತಿರುವವರ ಮಧ್ಯೆ ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮತ್ತೊಂದು ಅವಧಿಗೆ ಸಿಎಂ ಆಗಲು ಮನಸ್ಸು ಮಾಡುತ್ತಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.
ಬಿಹಾರದಲ್ಲಿ ಎನ್ ಡಿಎ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ.
ಸದ್ಯ ನಿತೀಶ್ ಕುಮಾರ ಅವರಿಗೆ ಬಿಜೆಪಿ ಮುಖಂಡರು ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ, ಈ ಹಿಂದಿನ ಸರ್ಕಾರಗಳಲ್ಲಿ ಇದ್ದಷ್ಟೇ ಸ್ವಾತಂತ್ರ್ಯವನ್ನು ನೀಡುವ ಆಶ್ವಾಸನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯುಗೆ ಕೇವಲ 43 ಸ್ಥಾನಗಳು ಬಂದಿವೆ. ಕಳೆದ 15 ವರ್ಷಗಳಲ್ಲೇ ಜೆಡಿಯು ತೋರಿದ ಅತಿ ಕನಿಷ್ಠ ಸಾಧನೆ ಇದಾಗಿದೆ.
ಇದರಿಂದ ತೀವ್ರ ಬೇಸರಗೊಂಡಿರುವ ನಿತೀಶ್ ಕುಮಾರ್ ಅವರು ಮತ್ತೆ ಮುಖ್ಯಮಂತ್ರಿ ಆಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
‘ಅಲ್ಲದೆ, ಜೆಡಿಯು ವಿರುದ್ಧ ಸ್ಪರ್ಧಿಸಿ ಎಲ್ ಜೆಪಿಯ ಚಿರಾಗ್ ಪಾಸ್ವಾನ್ ಅವರು ದೊಡ್ಡ ಹೊಡೆತ ಕೊಟ್ಟರು ಎಂಬುದೂ ನಿತೀಶ್ ಅವರ ತೀವ್ರ ಬೇಸರಕ್ಕೆ ಕಾರಣ.
ಚಿರಾಗ್ ನಿರ್ಧಾರದಿಂದ ಜೆಡಿಯು 25-30 ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ನಿತೀಶ್ ಕೊರಗುತ್ತಿದ್ದಾರೆ.
ಅದರೂ ನಾವು ಅವರನ್ನು ಮುಖ್ಯಮಂತ್ರಿ ಆಗುವಂತೆ ಮನವೊಲಿಸಿದ್ದೇವೆ’ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
PublicNext
13/11/2020 09:11 am