ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿತೀಶ್ ಗೆ ಮತ್ತೊಮ್ಮೆ ಸಿಎಂ ಹಾರ ಹಾಕಿದ ಬಿಹಾರ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಪ್ರಧಾನಿ ನರೇಂದ್ರ ಮೋದಿ ಮೋಡಿ ಮಾಡಿದ್ದಾರೆ. ಎನ್ ಡಿ ಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಕ್ಕಿದೆ. ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ 125 ಕ್ಷೇತ್ರಗಳನ್ನು ಎನ್ ಡಿ ಎ ಗೆದ್ದಿದ್ದು ಸತತ ನಾಲ್ಕನೇ ಬಾರಿ ನಿತೀಶ್ ಕುಮಾರ್ ಅವರು ಸಿಎಂ ಆಗೋದು ನಿಸ್ಸಂಶಯ.

ಈ ಬಾರಿ ಬಿಜೆಪಿ 74 ಸೀಟುಗಳನ್ನು ಗೆದ್ದರೆ, ನಿತೀಶ್ ಕುಮಾರ್ ಅವರ ಜೆಡಿಯು 43 ಸ್ಥಾನಗಳನ್ನು ಗೆದ್ದಿದೆ. ಆದರೆ ಇಲ್ಲಿ ಕೈಮೇಲಾಗಿದ್ದು ಬಿಜೆಪಿಯದ್ದು. ಸಹಜವಾಗಿ ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಇದಕ್ಕೆಲ್ಲಾ ತೆರೆ ಎಳೆದಿರುವ ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುಶಿಲ್ ಕುಮಾರ್ ಮೋದಿ, ನಾವು ಚುನಾವಣೆಗೆ ಮುನ್ನ ಮಾಡಿಕೊಂಡ ಬದ್ಧತೆಯಂತೆ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದಿದ್ದಾರೆ.

ಚುನಾವಣೆಯಲ್ಲಿ ಕೆಲವರು ಹೆಚ್ಚು ಸ್ಥಾನಗಳನ್ನು ಗೆಲ್ಲುವುದು, ಕೆಲವರು ಕಡಿಮೆ ಸ್ಥಾನಗಳು ಗೆಲ್ಲುವುದು ಸಹಜ. ಆದರೆ ನಾವು ಮತ್ತು ಜೆಡಿಯು ಸಮಾನ ಸಹಭಾಗಿಗಳು ಎಂದು ಸುಶಿಲ್ ಕುಮಾರ್ ಮೋದಿ ಹೇಳಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರ ನಡೆಸಿಲ್ಲ. ಇಲ್ಲಿ ನಿತೀಶ್ ಕುಮಾರ್ ಇಲ್ಲದೆ ಅಧಿಕಾರ ಸಾಧ್ಯವೂ ಇಲ್ಲ. ಆದರೆ ಈ ಬಾರಿ ಫಲಿತಾಂಶದಲ್ಲಿ ಬಿಜೆಪಿ ಕೈ ಮೇಲಾಗಿದೆ. ಈ ಬಾರಿ ನಿತೀಶ್ ಕುಮಾರ್ ಸರ್ಕಾರದ ಸಂಪುಟದಲ್ಲಿ ಅಧಿಕಾರ ಹಂಚಿಕೆಯಲ್ಲಿ ಬದಲಾವಣೆ ಕಾಣಬಹುದು.

ಹಿಂದೆ ಎನ್ ಡಿಎ ಮೈತ್ರಿಯಾಗಿದ್ದ ಚಿರಾಗ್ ಪಾಸ್ವಾನ್ ರ ಎಲ್ ಜೆಪಿ ಹೊರಬಂದಿದ್ದು ನಿತೀಶ್ ಕುಮಾರ್ ಗೆ ದೊಡ್ಡ ಹೊಡೆತ ನೀಡಿದೆ. ಅದು ಒಂದು ಸ್ಥಾನ ಗಳಿಸಿರಬಹುದು. ಆದರೆ ಅನೇಕ ಕ್ಷೇತ್ರಗಳಲ್ಲಿ ಜೆಡಿಯು ಪಕ್ಷದ ಮತ ವಿಭಜಿಸಿದೆ. ಇದರಿಂದಾಗಿ 2015ಕ್ಕಿಂತ ಈ ಬಾರಿ ಜೆಡಿಯುಗೆ ಕಡಿಮೆ ಮತ ಬಂದಿದೆ. 2015ರಲ್ಲಿ ಜೆಡಿಯು 71 ಸ್ಥಾನಗಳನ್ನು ಗಳಿಸಿತ್ತು.

ಚಿರಾಗ್ ಪಾಸ್ವಾನ್ ಅವರು ಜೆಡಿಯು, ನಿತೀಶ್ ಕುಮಾರ್ ವಿರುದ್ಧ ಸಿಡಿದೆದ್ದಿದ್ದು ಬಿಜೆಪಿಗೆ ವರವಾಗಲಿದೆ ಎಂದೇ ಬಹುತೇಕ ಮಂದಿ ಮಾತನಾಡಿಕೊಳ್ಳುತ್ತಿದ್ದರು.

Edited By : Nagaraj Tulugeri
PublicNext

PublicNext

11/11/2020 03:04 pm

Cinque Terre

61.5 K

Cinque Terre

3

ಸಂಬಂಧಿತ ಸುದ್ದಿ