ಒಟ್ಟು 25 ಸುತ್ತುಗಳಲ್ಲಿ ನಡೆಯಲಿರುವ ಆರ್.ಆರ್. ನಗರ ಕ್ಷೇತ್ರದ ಮತಗಳ ಎಣಿಕೆ ಪ್ರಗತಿಯಲ್ಲಿದ್ದು, 15ನೇ ಸುತ್ತಿನ ಅಂತ್ಯಕ್ಕೆ ಬಿಜೆಪಿಯ ಮುನಿರತ್ನ ಅವರು 35,526 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಹ್ಯಾಟ್ರಿಕ್ ಗೆಲುವಿನ ಕಡೆಗೆ ಮುನಿರತ್ನ ಮುನ್ನುಗ್ಗಿದ್ದಾರೆ.
ಕಾಂಗ್ರೆಸ್ ನ ಕುಸುಮಾ ಅವರಿಗೆ 43,116 ಮತಗಳು ಬಂದರೆ, ಜೆಡಿಎಸ್ ನ ಕೃಷ್ಣಮೂರ್ತಿ ಕೇವಲ 5638 ಮತಗಳನ್ನು ಮಾತ್ರ ಗಳಿಸಿದ್ದಾರೆ.
ಇನ್ನು ಕೇವಲ 10 ಸುತ್ತುಗಳ ಎಣಿಕೆ ಮಾತ್ರ ಬಾಕಿ ಉಳಿದಿದೆ.
ಮತ ಎಣಿಕೆ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮಟ್ಟಿದೆ.
PublicNext
10/11/2020 01:44 pm