ಹಾವೇರಿ: ಶಾಮನೂರು ಸಕ್ಕರೆ ಕಾರ್ಖಾನೆಯಿಂದ ದಿನ ನಿತ್ಯ ರೈತರಿಕೆ ನರಕ ಯಾತನೆ ಅನುಭವಿಸುವಂತಾಗಿದೆ.
ಕಾರ್ಖಾನೆ ಮಾಲೀಕರ ನಿರ್ಲಕ್ಷ್ಯಕ್ಕೆ ಕಾರ್ಖಾನೆ ಚಿಮಣಿಯಿಂದ ಕಪ್ಪು ಬೂದಿ ನೂರಾರು ಎಕರೆ ಕೃಷಿ ಭೂಮಿಗೆ ಹಾರಿ ಫಸಲಿಗೆ ಹಾನಿಯಾಗುತ್ತಿದ್ದು ರೈತರು ಸಿಡಿದೆದ್ದಿದ್ದಾರೆ.
ರೈತರ ಬೆಳೆಗಳಿಗೆ ಮರಣ ಶಾಸನದಂತಿರುವ ಶಾಮನೂರು ಸಕ್ಕರೆ ಕಾರ್ಖಾನೆ ವಿರುದ್ದ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಿರೆಬಿದರಿ ಗ್ರಾಮದ ರೈತರು ಆಕ್ರೋಶಿತಗೊಂಡಿದ್ದಾರೆ.
ವಿಜಯ ನಗರ ಜಿಲ್ಲೆ ಹರಪನಹಳ್ಳಿ ತಾಲೂಕು ದುಗ್ಗಾವತಿಯಲ್ಲಿರುವ ಶಾಮನೂರು ಶುಗರ್ಸ್ ಸಕ್ಕರೆ ಕಾರ್ಖಾನೆ, ರಾಣೆಬೆನ್ನೂರು ತಾಲೂಕು ಹಿರೇಬಿದರಿ ಬಳಿಯ ತುಂಗಭದ್ರಾ ನದಿ ಆಚೆ ಇರುವ ಶಾಮನೂರು ಸಕ್ಕರೆ ಕಾರ್ಖಾನೆಇಂದ ಸುಗಂಧರಾಜ , ಸೇವಂತಿ ಹೂ, ಭತ್ತ, ಹಣ್ಣು ತರಕಾರಿ ಬೆಳೆಗಾರರಿಗೆ ಭಾರಿ ಸಂಕಷ್ಟ ಉಂಟಾಗಿದೆ. ಹಾರುಬೂದಿ ಬೆಳೆಗಳ ಮೇಲೆ ಕುಳಿತು ಬೆಳೆಗಳ ಫಸಲು ಕುಂಠಿತವಾಗಿದೆ ಹಾಗೂ
ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದ್ದು,
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ಅಧಿಕಾರಿಗಳ ನಿರ್ಲಕ್ಷ್ಯ ನೋಡಿ ರೈತರು ಬೇಸತ್ತು ಹೋಗಿದ್ದಾರೆ.
PublicNext
19/01/2022 01:22 pm