ವಾರಾಣಸಿ : ಗೋವು ಕೆಲವರಿಗೆ ‘ಪಾಪ’, ನಮಗೆ ‘ತಾಯಿ’.. ಹಸುಗಳು, ಎಮ್ಮೆಗಳ ಮೇಲೆ ಹಾಸ್ಯ ಮಾಡುವವರು ಅವುಗಳಿಂದ ಬರುತ್ತಿರುವ ಕೋಟಿಗಟ್ಟಲೇ ಜೀವನೋಪಾಯವನ್ನು ಮರೆತು ಬಿಡುತ್ತಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ವಾರಾಣಸಿಯಲ್ಲಿ 870 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ 22 ಅಭಿವೃದ್ಧಿ ಯೋಜನೆಗಳನ್ನ ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದರು.
ಈ 'ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನವನ್ನು ದೇಶವು 'ಕಿಸಾನ್ ದಿವಸ್' ಆಚರಿಸುತ್ತಿದೆ ಎಂದರು. ಕೆಲವರು 'ಗೋವುಗಳು ಮತ್ತು ಅವುಗಳ ಸಗಣಿ ಬಗ್ಗೆ ಮಾತನಾಡುವುದಕ್ಕೆ ಗೇಲಿ ಮಾಡ್ತಾರೆ. ಹಸು ಮತ್ತು ಎಮ್ಮೆಗಳನ್ನ ಗೇಲಿ ಮಾಡುವವವರು ತಿಳಿಯಬೇಕಾದ ಸಂಗತಿ ಎಂದರೆ ದೇಶದ 80 ದಶಲಕ್ಷ ಕುಟುಂಬಗಳ ಜೀವನೋಪಾಯವನ್ನು ಈ ಜಾನುವಾರುಗಳು ನಿಭಾಯಿಸುತ್ತವೆ.
ಭಾರತದ ಡೈರಿ ವಲಯವನ್ನ ಬಲಪಡಿಸುವುದು ಇಂದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ' ಎಂದರು.
ದೇಶದಲ್ಲಿ ಹಾಲಿನ ಉತ್ಪಾದನೆ ಶೇ.45ರಷ್ಟು ಹೆಚ್ಚಾಗಿದೆ..! 6-7 ವರ್ಷಗಳ ಹಿಂದಿನದಕ್ಕೆ ಹೋಲಿಸಿದ್ರೆ, ದೇಶದಲ್ಲಿ ಹಾಲಿನ ಉತ್ಪಾದನೆ ಸುಮಾರು 45 ಪ್ರತಿಶತ ಹೆಚ್ಚಾಗಿದೆ. ಇಂದು, ಭಾರತವು ವಿಶ್ವದ ಶೇಕಡಾ 22ರಷ್ಟು ಹಾಲನ್ನು ಉತ್ಪಾದಿಸುತ್ತದೆ. ಉತ್ತರ ಪ್ರದೇಶ ಇಂದು ದೇಶದ ಅತ್ಯಂತ ಹಾಲು ಉತ್ಪಾದಿಸುವ ರಾಜ್ಯವಾಗಿದೆ. ಆದ್ರೆ, ಡೈರಿ ವಲಯದ ವಿಸ್ತರಣೆಯಲ್ಲೂ ಬಹಳ ಮುಂದಿದೆ ಎಂದು ನನಗೆ ಸಂತೋಷವಾಗಿದೆ ಎಂದರು.
PublicNext
23/12/2021 09:51 pm