ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಕೂಟಿ- ಕಾರು ಮಧ್ಯೆ ಡಿಕ್ಕಿ: ಸಂಸದ ಸಂಗಣ್ಣ ಕರಡಿ ಸಹೋದರ ಸ್ಥಳದಲ್ಲಿಯೇ ಸಾವು

ಕೊಪ್ಪಳ: ಸ್ಕೂಟಿ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸಂಸದ ಸಂಗಣ್ಣ ಕರಡಿ ಸಹೋದರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದ ಬಳಿ ಸಂಭವಿಸಿದೆ.

ಬಸವರಾಜ ಕರಡಿ (58) ಸ್ಥಳದಲ್ಲಿಯೇ ಸಾವಿಗೀಡಾದವರು. ಮೃತ ಬಸವರಾಜ ಕರಡಿ ಅವರು ಕೊಪ್ಪಳದಿಂದ ಟಣಕನಕಲ್‌ಗೆ ಹೋಗುತ್ತಿದ್ದರು. ಯಲಮಗೇರಿಯಿಂದ ಕೊಪ್ಪಳಕ್ಕೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

11/04/2022 03:43 pm

Cinque Terre

36.05 K

Cinque Terre

2

ಸಂಬಂಧಿತ ಸುದ್ದಿ