ತುಮಕೂರು- ಸಾರ್ವತ್ರಿಕ ಚುನಾವಣೆಗಿಂತ ಉಪಚುನಾವಣೆಗಳು ತೀವ್ರ ಆಸಕ್ತಿ ಕೆರಳುತ್ತವೆ. ಎಲ್ಲ ರಾಜಕೀಯಾಸಕ್ತರ ಚಿತ್ತ ಉಪಚುನಾವಣೆಯ ಕ್ಷೇತ್ರದತ್ತ ನೆಟ್ಟಿರುತ್ತದೆ. ಈಗ ಎಲ್ಲ ಚಿತ್ತ ಶಿರಾ ವಿಧಾನ ಸಭಾ ಕ್ಷೇತ್ರದತ್ತ ನೆಟ್ಟಿದೆ.
ಶಿರಾ ಕ್ಷೇತ್ರದಲ್ಲಿ ಸಮಾನ ಬಲಾಬಲದ ಅಭ್ಯರ್ಥಿಗಳು ಅಖಾಡದಲ್ಲಿ ಉಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ ಬಿ ಜಯಚಂದ್ರ, ಬಿಜೆಪಿಯಿಂದ ಡಾ. ಸಿ ಎಂ ರಾಜೇಶ್ ಗೌಡ, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಅಮ್ಮಾಜಮ್ಮ ಸ್ಪರ್ಧಿಸುತ್ತಿದ್ದಾರೆ.
ಶಾಸಕ ಬಿ. ಸತ್ಯನಾರಾಯಣ ಅವರ ನಿಧನದಿಂದ ಸ್ಥಾನ ತೆರವಾಗಿತ್ತು. ಈಗ ಅದೇ ಸ್ಥಾನಕ್ಕೆ ಅವರ ಪತ್ನಿ ಅಮ್ಮಾಜಮ್ಮ ಸ್ಪರ್ಧಿಸಿದ್ದಾರೆ. ಹೀಗಾಗಿ ಅನುಕಂಪದ ಮತಗಳು ಅವರಿಗೆ ಸಿಗಬಹುದೆಂಬ ಮಾತಿದೆ.
ಜೊತೆಗೆ ಟಿ. ಬಿ ಜಯಚಂದ್ರ ಅವರ ಬೆನ್ನ ಹಿಂದೆ ಇರುವ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಚಾರ ನಡೆಸಿದ್ದಾರೆ. ಜೊತೆಗೆ ಶಿರಾ ಕ್ಷೇತ್ರವನ್ನು ಪ್ರತಿಷ್ಟೆಯ ಕಣವಾಗಿ ಸ್ವೀಕರಿಸಿರುವ ಬಿಜೆಪಿ ತಮ್ಮ ಅಭ್ಯರ್ಥಿ ಡಾ. ಸಿಎಂ ರಾಜೇಶ್ ಗೌಡ ಅವರ ಗೆಲುವಿಗೆ 'ಹಗಲು-ರಾತ್ರಿ' ಶ್ರಮಿಸುತ್ತಿದೆ.
ಒಕ್ಕಲಿಗರು ಹಾಗೂ ಕುಂಚಟಿಗ ಸಮುದಾಯದ ಮತಗಳು ಇಲ್ಲಿ ನಿರ್ಣಾಯಕ ಮತಗಳಾಗಿವೆ. ಹೀಗಾಗಿ ಯಾರು ಗೆದ್ದ ಕುದುರೆಯ ಸವಾರಿ ಮಾಡಲಿದ್ದಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.
PublicNext
31/10/2020 06:16 pm