ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಮಾನವೀಯತೆ ಮೆರೆದ ಎಂ.ಪಿ ರೇಣುಕಾಚಾರ್ಯ

ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ನಡುರಸ್ತೆಯಲ್ಲಿ ಕೆಟ್ಟು‌ ನಿಂತಿದ್ದ ಆಂಬುಲೆನ್ಸ್ ಟೈರ್ ಬದಲಾಯಿಸಲು ನೆರವು ನೀಡುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.‌ಪಿ ರೇಣುಕಾಚಾರ್ಯ ಅವರು‌ ಮಾನವೀಯತೆ ಮೆರೆದಿದ್ದಾರೆ.

ಹೊನ್ನಾಳಿ ನಗರದ ನ್ಯಾಮತಿ ರಸ್ತೆಯಲ್ಲಿ ಆಂಬುಲೆನ್ಸ್ ಕೆಟ್ಟು ನಿಂತಿತ್ತು. ಅದೇ ಮಾರ್ಗವಾಗಿ ಬರುತಿದ್ದ ಶಾಸಕರು ಕೂಡಲೇ ತಮ್ಮ ವಾಹನ ನಿಲ್ಲಿಸಿ ವಾಹನದಲ್ಲಿದ್ದ ಜಾಕ್ ನೀಡಿದರು. ಖುದ್ದು ಸ್ಥಳದಲ್ಲಿ ನಿಂತು ಆಂಬುಲೆನ್ಸ್ ರಿಪೇರಿಗೆ ನೆರವಾದ ಶಾಸಕರು ಟೈರ್ ಬದಲಿಸಲು ಸಹಕರಿಸಿದರು.

ಬಳಿಕ ಆಂಬುಲೆನ್ಸ್‌ನಲ್ಲಿದ್ದ ರೋಗಿಯ ಅರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ಹೇಳಿದ ರೇಣುಕಾಚಾರ್ಯ ಅವರು ರೋಗಿಗೆ ಏನೇ‌ ಸಹಾಯ ಬೇಕಾದರೂ ಕೇಳಿ ಎಂದು ಸಾಂತ್ವನದ ಮಾತು ಹೇಳಿದರು.

Edited By :
PublicNext

PublicNext

30/07/2022 04:41 pm

Cinque Terre

44.17 K

Cinque Terre

0