ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಂಟಿಸಿ ಲೇಡಿ ಕಂಡಕ್ಟರ್‍ಗಳಿಗೆ ಡಿಫೆನ್ಸ್ ಟ್ರೈನಿಂಗ್!

ಬೆಂಗಳೂರು: ಬಿಎಂಟಿಸಿ ಲೇಡಿ ಕಂಡಕ್ಟರ್ ತಂಟೆಗೆ ಬರೋ ಮುನ್ನ ಹುಷಾರ್ ಆಗಿರಬೇಕು. ಏಕೆಂದರೆ ಮಹಿಳಾ ಕಂಡಕ್ಟರ್ ಗಳಿಗೆ ಸ್ವರಕ್ಷಣಾ ತರಬೇತಿ ನೀಡಲು ಬಿಎಂಟಿಸಿ ಮುಂದಾಗಿದೆ.

ಕೆಲಸದ ವೇಳೆ ಹಾಗೂ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳ ಬಗ್ಗೆ ಆಗಾಗ ದೂರು ದಾಖಲಾಗುತ್ತಿತ್ತು. ಹೀಗಾಗಿ ಬಸ್‌ಗಳಲ್ಲಿ ಬೇಕಾ ಬಿಟ್ಟಿ, ಅಸಭ್ಯವಾಗಿ ವರ್ತಿಸುವವರಿಗೆ ಪಾಠ ಕಲಿಸಲು ಬಿಎಂಟಿಸಿ ಮಾರ್ಷಲ್ ಆರ್ಟ್ಸ್, ಕರಾಟೆ, ಸಮರ ಕಲಿಸಲು ಯೋಜಿಸಿದೆ.

ಮಹಿಳಾ ಕಂಡಕ್ಟರ್ ಹಾಗೂ ಮಹಿಳಾ ಸಿಬ್ಬಂದಿಗೆ ಡಿಫೆನ್ಸ್ ಟ್ರೈನಿಂಗ್ ಕರಾಟೆ, ಜೂಡೋ, ಸಮರ ಕಲೆ, ಸ್ವಯಂ ದೃಢೀಕರಣ, ಕಾನೂನು ಜ್ಞಾನ, ಸಾರ್ವಜನಿಕ ಭಾಷಣದ ಬಗ್ಗೆ ತರಬೇತಿಯನ್ನು ನೀಡಲು ಬಿಎಂಟಿಸಿ ಮುಂದಾಗಿದೆ. 21 ದಿನಗಳ ಕೋರ್ಸ್ ಇದಾಗಿದ್ದು, 42 ಗಂಟೆಗಳ ತರಬೇತಿ ಹಾಗೂ 120 ನಿಮಿಷಗಳ ಸೆಷನ್ ನಡೆಸಲಾಗುತ್ತದೆ.

Edited By : Vijay Kumar
PublicNext

PublicNext

22/11/2020 09:13 am

Cinque Terre

62.17 K

Cinque Terre

5