ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅ.22 ಭಾರತಕ್ಕೆ ಪಾಕ್ ಕ್ರೂರತೆ ನೆನಪಿಸುವ ಕರಾಳ ದಿನ

ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯದ ಇತಿಹಾಸದಲ್ಲಿಯೇ ಇಂದು ಕರಾಳ ದಿನ. ಭವ್ಯ ಭಾರತವೇ ಪಾಕ್ ಕ್ರೂರತೆಯನ್ನು ನೆನಪಿಸುವ ಕರಾಳ ದಿನ.

ಹೌದು. 1947ರಲ್ಲಿ ಅಕ್ಟೋಬರ್​ 22ರಂದು ಪಾಕ್​ ಬೆಂಬಲಿತ ಲಷ್ಕರ್ ಪಡೆ ಅಕ್ರಮವಾಗಿ ಜಮ್ಮು ಕಾಶ್ಮೀರದ ಮೇಲೆ ದಾಳಿ ನಡೆಸಿತ್ತು. ಅತ್ಯಂತ ಅಮಾನುಷ ಹತ್ಯೆ, ಹಿಂಸೆ, ಅತ್ಯಾಚಾರ ಹಾಗೂ ದೌರ್ಜನ್ಯದ ನೆನಪು ಮಾಡಿಕೊಳ್ಳುವ ದಿನ ಇಂದು.

ಲಷ್ಕರ್​ ಸೇನೆಯಲ್ಲಿದ್ದ ಬುಡುಕಟ್ಟು ಜನಾಂಗದ ಪುರುಷರು ಕತ್ತಿ, ಕೊಡಲಿ, ಗನ್​ಗಳನ್ನ ಹಿಡಿದು ಪಾಕಿಸ್ತಾನ ಸೇನೆಯ ಬೆಂಬಲದೊಂದಿಗೆ ಕಾಶ್ಮೀರದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅನೇಕ ಜನರನ್ನು ಮಕ್ಕಳನ್ನ ಅಮಾನವೀಯವಾಗಿ ಕೊಲೆಗೈದರು, ಮಹಿಳೆಯರನ್ನ ತಮ್ಮ ಅಡಿಯಾಳಾಗಿ ಮಾಡಿಕೊಂಡು ಅಟ್ಟಹಾಸ ಮೆರೆದಿದ್ದರು. ಈ ಕೃತ್ಯದ ಮೂಲಕ ಕಣಿವೆಯಲ್ಲಿನ ಇಡೀ ಸಂಸ್ಕೃತಿಯನ್ನೇ ನಾಶ ಮಾಡಿದ್ದರು.

Edited By : Vijay Kumar
PublicNext

PublicNext

22/10/2020 06:25 pm

Cinque Terre

34.48 K

Cinque Terre

0