ರಾಯಿಟರ್ಸ್: ಇಂದು ದಕ್ಷಿಣ ಪಾಕಿಸ್ತಾನದಲ್ಲಿ ಸಂಭವಿಸಿದ ಭೂಕಂಪನದಲ್ಲಿ ಕನಿಷ್ಠ 15 ಮಂದಿ ಸಾವಿಗೀಡಾಗಿರುವುದು ವರದಿಯಾಗಿದೆ. ಇನ್ನು ಭೂಕಂಪದ ತೀವ್ರತೆ 5.7ರಷ್ಟಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪ ವಿಜ್ಞಾನ ಕೇಂದ್ರವು (ಇಎಂಎಸ್ಸಿ) ತಿಳಿಸಿದೆ.
ಪಾಕಿಸ್ತಾನದ ಕ್ವೆಟ್ಟಾದಿಂದ ಪೂರ್ವ-ಈಶಾನ್ಯ ಭಾಗದಲ್ಲಿ 102 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದ ಭೂಗರ್ಭದಲ್ಲಿ ಭೂಕಂಪನ ಕೇಂದ್ರ ಗುರುತಿಸಲಾಗಿದೆ. ಭೂಕಂಪದಿಂದ ರಸ್ತೆ ಸಂಪರ್ಕ, ವಿದ್ಯುತ್ ಪೂರೈಕೆ, ಮೊಬೈಲ್ ಫೋನ್ ನೆಟ್ ವರ್ಕ್ ಇರದ ಕಾರಣದಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿರುವುದಾಗಿ ವರದಿಯಾಗಿದೆ.
PublicNext
07/10/2021 08:07 am