ಟರ್ಕಿ: ಟರ್ಕಿಯ ಏಜಿಯನ್ ಪ್ರದೇಶದಲ್ಲಿ ಶುಕ್ರವಾರ 7.0 ತೀವ್ರತೆಯ ಭೂಕಂಪದ ಸಂಭವಿಸಿ, ಇಜ್ಮಿರ್‌ನಲ್ಲಿ ಕಟ್ಟಡ ಕುಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗ್ರೀಸ್ ಮತ್ತು ಟರ್ಕಿ ದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನ 2.51 ಗಂಟೆಗೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಕಟ್ಟಡಗಳು ನೆಲಸಮಗೊಂಡಿದ್ದು, ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಭೂಕಂಪನದ ಪರಿಣಾಮವಾಗಿ ಗ್ರೀಸ್ ದೇಶಕ್ಕೆ ಸೇರಿದ ಸ್ಯಾಮೋಸ್ ದ್ವೀಪದಲ್ಲಿ ಪುಟ್ಟ ಸುನಾಮಿ ಸೃಷ್ಟಿ ಆಗಿದೆ. ಅಮೆರಿಕದ ಜಿಯೋಲಾಜಿಕಲ್ ಸರ್ವೆ ಪ್ರಕಾರ ಸ್ಯಾಮೋಸ್ ದ್ವೀಪದ ಕಾರ್ಲೋವಸಿ ಪಟ್ಟಣದಿಂದ 14 ಕಿ.ಮೀ ದೂರದಲ್ಲಿ ರಿಕ್ಟರ್ ಮಾಪನದಲ್ಲಿ 7.0 ತೀವ್ರತೆಯ ಕಂಪನವಾಗಿದೆ. ಗ್ರೀಸ್ನ ಭೂಕಂಪನ ಮಾಪನ ಸಂಸ್ಥೆ ಪ್ರಕಾರ ಭೂಕಂಪ 6.7 ತೀವ್ರತೆ ಹೊಂದಿದ್ದರೆ, ಟರ್ಕಿ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 6.6 ತೀವ್ರತೆ ಇತ್ತು. ಟರ್ಕಿಯಲ್ಲಿ ನಾಲ್ವರು ಸತ್ತಿದ್ದು, 120ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
PublicNext
31/10/2020 09:09 am