ಬೊಲಿವಿಯಾ: ಮಾನವೀಯ ಅಂತಃಕರಣ ಮನಷ್ಯರಿಗಿಂತ ಒಮ್ಮೊಮ್ಮೆ ಪ್ರಾಣಿಗಳಲ್ಲೇ ಹೆಚ್ಚು ಅಂತ ಅನಿಸುತ್ತೆ. ಇದು ಅನೇಕ ಬಾರಿ ಅಪರೂಪದ ಘಟನೆಗಳಲ್ಲಿ ಸಾಬೀತಾಗಿದೆ.
ಬೊಲಿವಿಯಾದಲ್ಲಿ ಇಂತಹದ್ದೊಂದು ವನ್ಯಜೀವಿ ವಿಸ್ಮಯ ನಡೆದಿದೆ. ಕಾಳ್ಗಿಚ್ಚು ಹಬ್ಬಿದ ಪರಿಣಾಮ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಸಸ್ತನಿ 'ಸ್ಲಾತ್' ಪ್ರಾಣಿಯ ಮರಿಯನ್ನು ಅಲ್ಲಿನ ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಕೆಲಹೊತ್ತಿನ ನಂತರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅದರ ಅಮ್ಮನನ್ನು ಕೂಡ ಅಲ್ಲಿ ತರಲಾಗಿದೆ. ಅಷ್ಟರಲ್ಲಿ ತನ್ನ ಕಂದನನ್ನು ಗುರುತಿಸಿದ ಅಮ್ಮ ಸ್ಲಾತ್ ಅದರ ಬಳಿ ಹೋಗಿ ತಬ್ಬಿಕೊಂಡಿದೆ. ಅಪ್ಪಿ ಮುದ್ದಾಡಿದೆ. ಮತ್ತು ಮರ ಹತ್ತಿ ಕೂರಲು ಯತ್ನಿಸಿದೆ.
ಮನುಷ್ಯರಿಗೆ ಮಾನವೀಯ ಪಾಠ ಹೇಳಿಕೊಟ್ಟ ಈ ಅಪರೂಪದ ಸಂಗತಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ನೋಡಿದವರ ಕಣ್ಣು ತೇವಗೊಳಿಸಿ ಹೃದಯ ಗೆಲ್ಲುತ್ತಿದೆ.
PublicNext
09/09/2022 03:05 pm