ಯಾದಗಿರಿ: ಈ ಜಗತ್ತಿನಲ್ಲಿ ಹಸುಗಳನ್ನು ಗೋಮಾತೆ ಎಂದು ನಾವು ನೀವೆಲ್ಲಾ ಪೂಜೆ ಮಾಡುತ್ತೇವೆ. ದನಕರುಗಳು ಜನರ ಹಾಸುಹೊಕ್ಕಾಗಿದ್ದು, ಹಸುಗಳ ಲಾಲನೆ.. ಪಾಲನೆ ಮಾಡಿ ಸಣ್ಣ ಮಕ್ಕಳಂತೆ ಸಾಕುವುದು ವಾಡಿಕೆ.
ಭೂಮಿಗಿಂತ ಮಿಗಿಲಾದವಳು ತಾಯಿ ಎಂದು ತಿಳಿದಿರುವ ನಾವು ಹಸುವಿನಲ್ಲಿರುವ ಅಮ್ಮನ ಪ್ರೀತಿ ಶ್ವಾನದ ಮರಿಗಳಿಗೆ ತೋರುತ್ತಿರುವುದು ಕಂಡ ಜನರು ಒಂದು ಕ್ಷಣ ಬೆರಗಾಗಿ ಹೋಗಿದ್ದಾರೆ.ಅಂದಹಾಗೆ ಈ ಶ್ವಾನದ ಮರಿಗಳಿಗೆ ಹಸುವೊಂದು ಹಾಲುಣಿಸುವ ದೃಶ್ಯ ಕಂಡು ಬಂದಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಪೇಠ ಅಮ್ಮಾಪುರ ಗ್ರಾಮದ ಕೃಷ್ಣಮ್ಮ ಗಂಡ ಕನಕಪ್ಪ ಕಟ್ಟಿಮನಿ ದಂಪತಿ ಮನೆ ಮುಂದೆ.
ಈ ದಂಪತಿ ಸಾಕಿದ ಹಸು ನಿತ್ಯ ತನ್ನ ಕರುವಿಗೆ ಹಾಲು ಉಣಿಸೋದರ ಜತೆಗೆ ಈ ನಾಯಿ ಮರಿಗಳಿಗೂ ಹಾಲು ನೀಡುತ್ತೆ. ಇಂಥ ಭಾವನಾತ್ಮಕ ಪ್ರೀತಿ ಕಂಡ ಜನರು ಮೊಬೈಲ್ ನಲ್ಲಿ ಚಿತ್ರೀಕರಿಸುವದ ಜೊತೆಗೆ ಈ ದೃಶ್ಯ ಕಣ್ತುಂಬಿಸಿಕೊಂಡು ಹಸುವಿಗೆ ಹಾಗೂ ಕುಟುಂಬದವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ: ಮೌನೇಶ ಬಿ.ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
03/01/2022 02:11 pm