ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈದರಾಬಾದ್: ಪ್ರಾಣ ಪಣಕ್ಕಿಟ್ಟು ಅರ್ಚಕರನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್: ಮೈ ಜುಮ್ಮೆನ್ನುವ ವಿಡಿಯೋ

ಹೈದರಾಬಾದ್: ಅಕಾಲಿಕವಾಗಿ ಬಂದ ಮಳೆಯಿಂದ ಆಗುತ್ತಿರುವ ಅವಾಂತರಗಳು ಒಂದೆರಡಲ್ಲ. ಇದು ಜನರ ಬದುಕನ್ನೇ ಕಸಿದಿದೆ.

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನೀರಿನ ಸೆಳೆತಕ್ಕೆ ಸಿಕ್ಕ ಅರ್ಚರೊಬ್ಬರನ್ನ ಸ್ಥಳೀಯ ಸಂಚಾರಿ ಪೊಲೀಸ್ ಒಬ್ಬರು ದೇವರಂತೆ ಬಂದು ಕಾಪಾಡಿದ್ದಾರೆ. ನಿನ್ನೆ ಸೋಮವಾರ ರಾತ್ರಿ ಕೊಡವಲೂರು ದೇವಸ್ಥಾನದ ಅರ್ಚಕರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಇದನ್ನು ಗಮನಿಸಿದ ಸಂಚಾರಿ ಪೊಲೀಸ್ ಒಬ್ಬರು ಕೂಡಲೇ ಹಗ್ಗದ ಸಹಾಯದಿಂದ ನೀರಿಗಿಳಿದಿದ್ದಾರೆ. ತಮ್ಮ ಪ್ರಾಣಭಯದ ನಡುವೆಯೂ ಅರ್ಚಕರನ್ನು ಕಾಪಾಡಿದ್ದಾರೆ. ಮತ್ತು ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಆಗ ಕಣ್ಣೀರಿಟ್ಟ ಆ ಅರ್ಚಕ ತಮ್ಮ ಕಾಪಾಡಿದ ಪೊಲೀಸ್ ಗೆ ಥ್ಯಾಂಕ್ಸ್ ಹೇಳಿದ್ದಾರೆ.

Edited By : Manjunath H D
PublicNext

PublicNext

23/11/2021 04:37 pm

Cinque Terre

50.37 K

Cinque Terre

0