ತುಮಕೂರು : ಹರಿಯುತ್ತಿರುವ ನೀರಿನಲ್ಲಿ ಆಟವಾಡಲು ಮುಂದಾದ ಯುವಕ ಹಾಗೂ ಓರ್ವ ಬಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ತುಮಕೂರು ಗ್ರಾಮಾಂತರ ಗೂಳೂರು ಕೆರೆಯಲ್ಲಿ ನಡೆದಿದೆ.
ನಿರಂತರ ಮಳೆಯಿಂದಾಗಿ ಗೂಳುರು ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಇನ್ನು ಕೆರೆ ಕೋಡಿ ನೀರಿನಲ್ಲಿ ಆಟ ಆಡಲು ಹೋಗಿದ್ದ ಯುವಕರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಸ್ಥಳೀಯರು ಕ್ಷಣಾರ್ಧದಲ್ಲಿ ಯುವಕರನ್ನು ಕಾಪಾಡಿದ್ದಾರೆ.
ಯುವಕರು ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ
PublicNext
06/08/2022 02:27 pm