ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾವಣೆ ವಿಚಾರಕ್ಕೆ ವಿಧಾನ ಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತುಮೈಸೂರಿನಲ್ಲಿ ಸುದ್ದಿಗೊಷ್ಠಿ ನೆಡೆಸಿ ಪ್ರತಿಕ್ರಿಯಿಸಿರುವ ಅವರು ಹೆಸರಿಲ್ಲದ ಹತ್ತಾರು ರೈಲುಗಳಿವೆ ಒಡೆಯರ್ ಹೆಸರನ್ನ ಹೊಸ ರೈಲ್ವೆ ಗಳಿಗೆ ನೀಡಬಹುದಿತ್ತು. ಹೆಸರು ಬದಲಿಸಲು ಟಿಪ್ಪು ಎಕ್ಸ್ಪ್ರೆಸ್ ರೈಲು ಯಾಕೆ ಬೇಕಿತ್ತು. ಒಂದು ಹೆಸರನ್ನ ಅಳಿಸಿ ಮತ್ತೊಂದು ಹೆಸರು ಸೇರಿಸುವುದು ಎಷ್ಟು ದೊಡ್ಡ ಕೆಲಸ? ಬಿಜೆಪಿ ಧರ್ಮ ಧರ್ಮಗಳನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ ಕಿಡಿಕಾರಿದ್ದಾರೆ.
PublicNext
08/10/2022 01:21 pm