ಮೈಸೂರು:ಜೆ.ಎಸ್.ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಕಾಲೇಜು, ಮೈಸೂರು ಮತ್ತು ಸಮರ್ಥನಂ ವಿಶೇಷ ಚೇತನರ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಯುವ ವಿಶೇಷಚೇತನರಿಗಾಗಿ ಉದ್ಯೋಗ ಮೇಳವನ್ನು ಅ.8 ರಂದು ಬೆಳಿಗ್ಗೆ 9ರಿಂದ ಮದ್ಯಾಹ್ನ 1 ಗಂಟೆ ವರೆಗೆ ಮೈಸೂರು ನಗರದ ಮಾನಸಗಂಗೋತ್ರಿಯ ಜೆ.ಎಸ್.ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಕಾಲೇಜು (ಜೆ.ಸಿ.ಕಾಲೇಜು) ಆವರಣದಲ್ಲಿ ಆಯೋಜಿಸಲಾಗಿದೆ.
18 ವರ್ಷದಿಂದ 35 ವರ್ಷದ ಒಳಗಿನ ವಿಶೇಷಚೇತನರು ಸದರಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾದ, ಪಿ.ಯು.ಸಿ., ಡಿಪ್ಲೊಮಾ ಮತ್ತು ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ವಿಶೇಷ ಚೇತನರು ಭಾಗವಹಿಸಬಹುದಾಗಿದೆ. ಉದ್ಯೋಗಮೇಳದಲ್ಲಿ ಭಾಗವಹಿಸುವವರು ಬಯೋ ಡೇಟಾದ ಕನಿಷ್ಠ 3 ಪ್ರತಿಗಳು ಕನಿಷ್ಠ 3 ಪಾಸ್‌ಪೋರ್ಟ್ ಅಳೆತೆಯ ಭಾವ ಚಿತ್ರಗಳು, ಶೈಕ್ಷಣಿಕ ಅರ್ಹತೆಯ ಸಕಲು ಪತ್ರಿಗಳು, ಅಂಗವಿಕಲರ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ತರಬೇಕು. ವಿಕಲಚೇತನರು https://www.samarthanam.org/job-fair/ ಈ ಲಿಂಕ್ ನಲ್ಲೂ ನೊಂದಣಿ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಮರ್ಥನಂ ಸಹಾಯವಾಣಿ 080 68333999 ಅಥವಾ ಸಂಪರ್ಕಿಸಿ-8050709919 , 6364867795, 9380224233, 6364867818, 9449864693 ಸಂಪರ್ಕಿಸಬಹುದು ಎಂದು ಜೆ.ಎಸ್.ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಬಿ.ಇಳಂಗೊವನ್ ಹಾಗೂ ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಸಂಯೋಜಕ ಎಂ. ಶಿವರಾಜು ತಿಳಿಸಿದ್ದಾರೆ.
Kshetra Samachara
07/10/2022 03:02 pm