ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು ದಸರಾದಲ್ಲಿ ಈ ಬಾರಿ ಅರ್ಜುನನೇ ಬಲಶಾಲಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎರಡನೇ ತಂಡದ ಆನೆಗಳಿಗೆ ಇಂದು ತೂಕ ಹಾಕುವ ಪ್ರಕ್ರಿಯೆ ನಡೆದಿದ್ದು, ಮೊದಲ ತಂಡದಲ್ಲಿ ಆಗಮಿಸಿದ ಆನೆಗಳ ತೂಕವು ನಡೆಯಿತು.

ದಸರಾ ಗಜಪಡೆಗಳ ತೂಕ ಪ್ರಕ್ರಿಯೆಯು ಮೈಸೂರಿನ ಧನ್ವಂತ್ರಿಯಲ್ಲಿನ ವೇ ಬ್ರಿಡ್ಜ್ ನಲ್ಲಿ ನಡೆದಿದ್ದು, ಈ ಬಾರಿಯೂ ಅರ್ಜನನೇ ಬಲಶಾಲಿ ಅಂತ ನಿರೂಪಿಸಿದ್ದಾನೆ. ಈತ ಬರೋಬ್ಬರಿ 5,885 ಕೆ.ಜಿ ತೂಕ ಹೊಂದಿದ್ದಾನೆ. ಬಂದಾಗ 5775 ಕೆ.ಜಿ ತೂಕ ಹೊಂಡಿದ್ದ.

3920 ಕೆ.ಜಿ ತೂಕವಿದ್ದ ಭೀಮ 4,345 ಕೆ ಜಿ ತೂಕ ಹೊಂದಿದ್ದಾನೆ. ಹಾಗೆಯೇ ಮಹೇಂದ್ರ 4450 ಕೆ.ಜಿ ತೂಕ ಹೊಂದಿದ್ದು, ಬಂದಾಗ 4250 ಕೆ.ಜಿ ತೂಕವಿದ್ದ. ವಿಜಯ 2760 ಕೆ.ಜಿ, ಗೋಪಿ 4670 ಕೆ.ಜಿ, ಪಾರ್ಥಸಾರಥಿ 3445 ಕೆ.ಜಿ ತೂಕ ಹೊಂದಿದ್ದಾರೆ. ಇನ್ನು ಬಂದಾಗ 4810 ಕೆ.ಜಿ ತೂಕವಿದ್ದ ಧನಂಜಯ 4890 ಕೆ. ಜಿ ತೂಕ ಹೊಂದಿದ್ದಾನೆ. ಶ್ರೀರಾಮ 4475 ಕೆ. ಜಿ, ಸುಗ್ರೀವ 4785 ಕೆ. ಜಿ ತೂಕವಿದೆ. ಹೀಗೆ ಪ್ರತಿಯೊಂದು ಗಜಪಡೆಯ ಬಗ್ಗೆ ಡಿಸಿಎಫ್‌ ಕರಿಕಾಳನ್ ಮಾಹಿತಿ ನೀಡಿದ್ದಾರೆ.

ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲು ಮತ್ತು ಎರಡನೇ ತಂಡದ ಆನೆಗಳು ಒಟ್ಟು ಸೇರಿ 14 ಆನೆಗಳನ್ನು ನಾವು ತೂಕ ಮಾಡಿದ್ದೇವೆ. ಎರಡನೇ ತಂಡದ ಎಲ್ಲ ಗಂಡಾನೆಗಳೂ 4000 ದಿಂದ 4600 ಕೆ.ಜಿ.ವರೆಗೂ ಇದ್ದು, ಕಿರಿಯ ವಯಸ್ಸಿನ ಆನೆಯಾಗಿರುವ ಪಾರ್ಥಸಾರಥಿ ಆನೆ 3,445 ತೂಕ ಹೊಂದಿದೆ. ಮೊದಲನೇ ತಂಡದ ಎಲ್ಲ ಆನೆಗಳ ತೂಕದಲ್ಲಿ ಹೆಚ್ಚಾಗಿದ್ದು, ನಮ್ಮ ತಾಲೀಮುಗಳಿಗೂ ಕೂಡ ತುಂಬ ಚೆನ್ನಾಗಿ ಸಹಕರಿಸುತ್ತಿವೆ ಎಂದು ತಿಳಿಸಿದರು.

ಈ ದಿನ ಮೊದಲನೇ ಬಾರಿಗೆ ಎಲ್ಲ 14 ಆನೆಗಳನ್ನು ತೂಕ ಮಾಡುವ ಸಲುವಾಗಿ ಅರಮನೆಯಿಂದ ಹೊರ ಕರೆತಂದಿದ್ದು, ಶ್ರೀರಾಮ ಮತ್ತು ಪಾರ್ಥಸಾರಥಿ ಆನೆಗಳು ಮೊದಲನೇ ತಂಡದ ಆನೆಗಳ ಜೊತೆ ಸೇರಿ ನಿನ್ನೆಯಿಂದಲೇ ತಾಲೀಮಿನಲ್ಲಿ ಭಾಗವಹಿಸಿವೆ. ಸೆ.12 ರಿಂದ ಎಲ್ಲ ಆನೆಗಳು ತಾಲೀಮಿನಲ್ಲಿ ಭಾಗವಹಿಸಲಿವೆ.

Edited By :
PublicNext

PublicNext

10/09/2022 08:34 am

Cinque Terre

36.07 K

Cinque Terre

0

ಸಂಬಂಧಿತ ಸುದ್ದಿ