ಮೈಸೂರು: ಸಾಂಸ್ಕೃತಿಕ ಸಿರಿ ಮತ್ತು ಧಾರ್ಮಿಕ ಐಸಿರಿಯ ಸಮ್ಮಿಲನವಾದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇಂದು ಜಂಬೂ ಸವಾರಿ, ಬನ್ನಿಮಂಟಪದಲ್ಲಿ ವಿವಿಧ ಕಾರ್ಯಕ್ರಮ ನೆರವೇರುವ ಮೂಲಕ ತೆರೆ ಬೀಳಲಿದೆ. ಆದರೆ, ದಸರೆಗೆ ಮೆರುಗು ಹೆಚ್ಚಿಸಿರುವ ಬೆಳಕಿನ ಚಿತ್ತಾರ ಇನ್ನೂ 10 ದಿನ ಇರಲಿದೆ.
124 ಕಿ.ಮೀ. ರಸ್ತೆ ಹಾಗೂ 96 ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರದಿಂದ ಮೈಸೂರು ಝಗಮಗಿಸುತ್ತಿದೆ. ಸೂರ್ಯಾಸ್ತದಿಂದ ರಾತ್ರಿ 10.30ರವರೆಗೂ ಬೆಳಗುತ್ತಿರುವ ದೀಪಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ದಸರಾ ಮುಗಿದ ನಂತರವೂ ಅಂದರೆ ವಿಜಯದಶಮಿ ಬಳಿಕ 10 ದಿನಗಳ ಕಾಲ ದೀಪಾಲಂಕಾರ ಇರಲಿದೆ.
ಈ ಕುರಿತು ಬುಧವಾರ ಮೈಸೂರಿನಲ್ಲಿ ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಜನರ ಮನಸೆಳೆದಿರುವ ದಸರಾ ದೀಪಾಲಂಕಾರ ಇನ್ನೂ 10 ದಿನ ಇರುತ್ತೆ ಎಂದಿದ್ದಾರೆ.
PublicNext
05/10/2022 06:14 pm