ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ಮಾಧ್ಯಮಗಳ ಕ್ಯಾಮರಾ ಕಂಡು ಮಾಜಿ ಮುಡಾ ಆಯುಕ್ತ ನಟೇಶ್ ಗರಂ.!

ಮೈಸೂರು : ಮುಡಾ 50:50 ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಕಚೇರಿಗೆ ಮಾಜಿ ಮುಡಾ ಆಯುಕ್ತ ನಟೇಶ್‌ ವಿಚಾರಣೆಗೆ ಹಾಜರಾಗಿದ್ದಾರೆ. ಸಿಎಂ ಪತ್ನಿ ಪಾರ್ವತಿ ಅವರಿಗೆ 14 ಸೈಟನ್ನ ಕಾನೂನು ಬಾಹಿರವಾಗಿ ನಿಯಮ ಉಲ್ಲಂಘನೆ ಮಾಡಿ ಸೈಟು ಹಂಚಿಕೆ ಮಾಡಿದ ಆರೋಪ ಹಿನ್ನಲೆಯಲ್ಲಿ ಅವರಿಗೆ ಲೋಕಾಯುಕ್ತದಿಂದ ನೋಟಿಸ್ ನೀಡಲಾಗಿತ್ತು.

ಈ ವೇಳೆ ಮಾಧ್ಯಮದ ಕ್ಯಾಮೆರಾ ಕಂಡು ನಟೇಶ್ ಗರಂ ಆಗಿದ್ದು, ನಾನೇನು ಡ್ಯಾನ್ಸ್ ಮಾಡ್ತಾ ಇದ್ದೀನಾ.? ನನ್ನ ವಿಡಿಯೋ ಏಕೆ ತೆಗೆಯುತ್ತಿದ್ದೀರಾ ಅಂತಾ ಗರಂ ಆಗಿದ್ದಾರೆ. ಅಲ್ಲದೆ, ಆಟೋದಲ್ಲಿ ಲೋಕಾಯುಕ್ತ ಕಚೇರಿಗೆ ಆಗಮಿಸಿದ ನಟೇಶ್ ಬರುವ ಮುನ್ನವೇ ಸಾಕಷ್ಟು ಗಾಬರಿಯಾಗಿ ದಾಖಲೆ ಸಮೇತ ಲೋಕಾ ಕಚೇರಿಗೆ ಎಂಟ್ರಿ ಕೊಟ್ಟಿದ್ದಾರೆ.

Edited By : Vinayak Patil
PublicNext

PublicNext

19/11/2024 06:45 pm

Cinque Terre

27.98 K

Cinque Terre

3

ಸಂಬಂಧಿತ ಸುದ್ದಿ