ಮೈಸೂರು : ಸಿಎಂ ಸಿದ್ದರಾಮಯ್ಯ ಕುಟುಂಬದ ಮೇಲಿನ ಲೋಕಾಯುಕ್ತ ತನಿಖೆ ವಿಚಾರಣೆಗೆ ಈ ಹಿಂದಿನ ಎಡಿಸಿ ಹಾಗೂ ಮುಡಾ ಆಯುಕ್ತರಾಗಿದ್ದ ಪಾಲಯ್ಯ ಅವರು ಎರಡನೇ ಬಾರಿಗೆ ಇಂದು ಲೋಕಾ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ಬಳಿಕ ಮಾತನಾಡಿದ ಅವ್ರು, ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ಟಪಾಲಿನ ಮೂಲಕ ಮನವಿ ನೀಡಿದ್ದರು ಆಗ ನಾನೇ ಮುಡಾದ ಆಯುಕ್ತನಾಗಿದ್ದೆ ಎಂದಿದ್ದಾರೆ.
ಇಂದು ಎರಡನೇ ಬಾರಿ ಮಾಹಿತಿ ಪಡೆಯಲು ಕರೆದಿದ್ದರು ಈ ಹಿನ್ನೆಲೆಯಲ್ಲಿ ಬಂದಿದ್ದೆ. ಮೊದಲ ಬಾರಿ ಜಮೀನಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದರು. ಆಗ ನಾನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಯಾಗಿದ್ದೆ. ಈಗ ಮುಡಾಗೆ ಸಂಬಂಧಪಟ್ಟ ಮಾಹಿತಿ ಪಡೆಯಲು ಕರೆದಿದ್ದರು. ಎಲ್ಲಾ ಮಾಹಿತಿ ನೀಡಿದ್ದೇನೆ ಮತ್ತೆ ಕರೆದರೆ ಬರುತ್ತೇನೆ. ಒಬ್ಬ ಅಧಿಕಾರಿಯಾಗಿ ತನಿಖಾ ಸಂಸ್ಥೆಗೆ ಮಾಹಿತಿ ನೀಡುವುದು ನನ್ನ ಜವಾಬ್ದಾರಿ ಎಂದರು.
PublicNext
20/11/2024 03:25 pm