ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ವಾಟರ್ ಬಿಲ್‌ಗಾಗಿ ನಗರಸಭಾ ಸದಸ್ಯರ ಟಾಕ್‌ವಾರ್!

ನಂಜನಗೂಡು: ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್ ನೀಡುತ್ತಿರುವ ನಂಜನಗೂಡಿನ ನಗರಸಭೆ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂಜನಗೂಡು ನಗರದ ನಗರಸಭಾ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ಆಯುಕ್ತ ನಂಜುಂಡಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಾಟರ್ ಬಿಲ್‌ಗಾಗಿ ನಗರಸಭಾ ಸದಸ್ಯರ ಟಾಕ್‌ವಾರ್ ಜೋರಾಗಿಯೇ ನಡೆದಿದೆ.

ನಗರ ಸಭಾ ಆಧ್ಯಕ್ಷ ಶ್ರೀಕಂಠ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರಸಭೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ನಮ್ಮ ಅಧಿಕಾರದ ಅವಧಿಯಲ್ಲಿ ಈ ರೀತಿ ನಡೆದಿರಲಿಲ್ಲ. ಕುಡಿಯುವ ನೀರಿನ ಬಿಲ್ ಎಂಬತ್ತು ಸಾವಿರಕ್ಕೆ ಏರಿಕೆಯಾಗಿದೆ. ಸಾಮಾನ್ಯ ಜನರು ನೀರಿನ ಬಿಲ್ ಕಟ್ಟುವುದಾದರೂ ಹೇಗೆ ಎಂದು ಮಾಜಿ ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ ಮತ್ತು ಸದಸ್ಯ ಮಹದೇವಪ್ರಸಾದ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಭೆ ಮುಗಿಯುವ ತನಕ ಗದ್ದಲದ ಗೂಡಾಗಿಯೇ ಪರಿಣಮಿಸಿತು.

ಅಧಿಕಾರಿಗಳ ದುರಾಡಳಿತದಿಂದ ನಂಜನಗೂಡಿನ ಜನರು ಈಗಾಗಲೇ ರೊಟ್ಟಿಗೆದ್ದಿದ್ದಾರೆ ಕೂಡಲೇ ನಗರಸಭಾ ಆಡಳಿತ ಎಚ್ಚೆತ್ತುಕೊಂಡು ಕುಡಿಯುವ ನೀರಿಗೆ ನೀಡುತ್ತಿರುವ ಬಿಲ್ಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ನಲ್ಲಿಗಳಿಗೆ ಅಳವಡಿಸಿರುವ ಮೀಟರ್ ಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ ತಿಳಿಸಿದರು.

Edited By : Vinayak Patil
Kshetra Samachara

Kshetra Samachara

19/11/2024 06:53 pm

Cinque Terre

11.98 K

Cinque Terre

0

ಸಂಬಂಧಿತ ಸುದ್ದಿ