ನಂಜನಗೂಡು: ಕಾಡು ತೊರೆದು ನಾಡಿಗೆ ಬಂದು ನೆಲೆಸಿದರೂ ಮೂಲ ಆದಿವಾಸಿ ಜನರಿಗೆ ಬವಣೆ ತಪ್ಪಿಲ್ಲ. ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಸುಮಾರು 21 ಕುಟುಂಬ ಹೈರಾಣಾಗಿದ್ದಾರೆ. ಪರಿಶಿಷ್ಟ ಪಂಗಡ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ. ನಂಜನಗೂಡು ತಾಲ್ಲೂಕಿನ ಹುರ ಹಾಗೂ ಕಪ್ಪುಸೋಗೆ ಗ್ರಾಮದಲ್ಲಿ ಸುಮಾರು 21 ಕಾಡುಕುರುಬ ಸೋಲಿಗ ಜನಾಂಗದ ಕುಟುಂಬಗಳು ನೆಲೆಸಿವೆ. ಕೆಲವು ದಶಕಗಳ ಹಿಂದೆ ಸರ್ಕಾರ ನೀಡಿದ ಕರೆ ಮೇಲೆ ಕಾಡು ತೊರೆದ ಈ ಕುಟುಂಬಗಳು ನಾಡು ಸೇರಿವೆ. ವರುಷಗಳೇ ಉರುಳಿದರೂ ಈ ಕುಟುಂಬಗಳು ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿವೆ. ಪಡಿತರ ಚೀಟಿ ಇಲ್ಲ, ಆಧಾರ್ ಕಾರ್ಡ್ ಇಲ್ಲದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಇವರಿಗೆ ತಲುಪಿಲ್ಲ.
ವಾಸಿಸಲು ಮನೆ, ಸರ್ಕಾರದಿಂದ ಸಾಕಷ್ಟು ವರ್ಷಗಳಿಂದ ವಿತರಿಸಲಾಗುತ್ತಿರುವ ಪೌಷ್ಟಿಕ ಆಹಾರ ಪದಾರ್ಥ, ವಾಸದ ಗುಡಿಸಲು ಗಳಿಗೆ ವಿದ್ಯುತ್ ಸಂಪರ್ಕ ಬಂದಿಲ್ಲ. ಮೂರು ತಲೆಮಾರುಗಳ ಹಿಂದೆ ಕಾಡು ತೊರೆದು ನಾಡಿಗೆ ಬಂದು ನೆಲೆಸಿದರೂ ಇದುವರೆಗೂ ಪರಿಶಿಷ್ಟ ಪಂಗಡ ಅಧಿಕಾರಿಗಳು ಇವರ ಕುಟುಂಬದ ಬಳಿ ಭೇಟಿ ನೀಡಿ ಪರಿಶೀಲಿಸಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ಹೀನಾಯ ಬದುಕು ಸಾಗಿಸುತ್ತಿರುವ ಈ ಕುಟುಂಬಗಳಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುವವರೇ ಕಾದು ನೋಡಬೇಕಿದೆ.
ಸಿಎಂ ಸುಗಂಧರಾಜು, ಪಬ್ಲಿಕ್ ನೆಕ್ಸ್ಟ್, ನಂಜನಗೂಡು
PublicNext
27/11/2024 08:03 pm