ಬೆಂಗಳೂರು: ವಕ್ಫ ವಿವಾದ ಕುರಿತ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ಮಾಡಲು ಯತ್ನಾಳ್ ನೇತೃತ್ವದ ಬಿಜೆಪಿ ರೆಬಲ್ಸ್ ಟೀಂ ಸಜ್ಜಾಗಿದೆ. ಬೀದರ್ ನಿಂದ ಬೆಳಗಾವಿವರೆಗೆ ಒಂದು ತಿಂಗಳು ಜನಜಾಗೃತಿ ಅಭಿಯಾನ ನಡೆಸಲಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಬಿಜೆಪಿ ರೆಬಲ್ಸ್ ಟೀಂನಲ್ಲಿ ಗುರುತಿಸಿಕೊಂಡ ನಾಯಕರೆಲ್ಲ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಕ್ಫ್ ಟ್ರಿಬ್ಯೂನಲ್ ರದ್ದಾಗಬೇಕಿದೆ. ಆ ಟ್ರಿಬ್ಯೂನಲ್‌ನಿಂದ ದೊಡ್ಡ ಶಾಪ ಆಗಿಬಿಟ್ಟಿದೆ. ಅದರಲ್ಲಿ ಒಂದೇ ಕೋಮಿನವರು ಇರುತ್ತಾರೆ. ಅದ್ರ ಮುಂದೆ ನಮ್ಮ ರೈತರು ಹೋಗಿ ನಿಲ್ಲಬೇಕಿದೆ. ಹೀಗಾಗಿ ಆ ಟ್ರಿಬ್ಯೂನಲ್
ರದ್ದತಿಯಾಗಬೇಕು ಎಂದರು.
ವಕ್ಫ್ ಬೋರ್ಡ್ ವಿರುದ್ಧ ಕಿಡಿ ಕಾರಿದ ಯತ್ನಾಳ್, ಕರ್ನಾಟಕದಲ್ಲಿ 6 ಲಕ್ಷದ 70 ಸಾವಿರ ಎಕರೆ ವಕ್ಪ್ ಆಸ್ತಿ ಎಂದು ಸ್ವಾಧೀನ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ ಅವರು ಇದಕ್ಕಾಗಿಯೇ ನಾವು ಕರ್ನಾಟಕದಲ್ಲಿ ಜನ ಜಾಗೃತಿ ಮಾಡುತ್ತಿರೋದಾಗಿ ಹೇಳಿದರು. ಈ ಜನಜಾಗೃತಿ ಅಭಿಯಾನದ ಬಳಿಕ ಜೆಪಿಸಿಗೆ ಪೂರ್ಣ ವರದಿ ಕೊಡುತ್ತೇವೆ ಎಂದರು.
PublicNext
15/11/2024 06:09 pm